ಜಲಜೀವನ್ ವಾಟರ್ ಸಪ್ಲಾಯ್ ಕೆಲಸದವರ‌ ನಿರ್ಲಕ್ಷ್ಯ

0

ನೀರಿಲ್ಲದೆ ಕಂಗಾಲಾದ ಚೆನ್ನಕೇಶವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು

ಸುಳ್ಯ ಪೇಟೆಯಲ್ಲಿ ಅಸಮರ್ಪಕ ಕಾಮಗಾರಿಯನ್ನು ನಡೆಸುತ್ತಿರುವ ಜಲಜೀವನ್ ಕಾಮಗಾರಿಯಿಂದಾಗಿ ನಿನ್ನೆ (ಡಿ. 7) ಮಧ್ಯಾಹ್ನ ನಂತರ ಶ್ರೀ ಚೆನ್ನಕೇಶವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಿಗೆ ನೀರಿನ ಅಭಾವ ಉಂಟಾಗಿದೆ. ಕಾಮಗಾರಿಯ ಸಂದರ್ಭದಲ್ಲಿ ಈಗಾಗಲೇ ಇದ್ದ ನೀರು ಸರಬರಾಜು ಪೈಪಿಗೆ ಹಾನಿಯಾಗಿ‌ ನೀರು ರಸ್ತೆಯಲ್ಲೇ ಹರಿದುಹೋಗುತ್ತಿದೆ.

ಜನ ಅನುಭವಿಸುತ್ತಿರುವ ಕಷ್ಟಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಇಲಾಖೆ ಕೈಕಟ್ಟಿ ಕೂತಿರುವುದಕ್ಕೆ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.