ಸ್ಕೂಟಿಯಿಂದ ಬಿದ್ದು ಸಂಪಾಜೆ ಪಿ.ಡಿ.ಒ.ಗೆ ಗಾಯ

0

ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಪಿಂಟೋ ರವರು ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ.

ಜುಲೈ 18ರಂದು ಸಂಜೆ ಅವರು ತನ್ನ ಸ್ಕೂಟಿಯಲ್ಲಿ ಬೆಳ್ಳಾರೆಯ ಮನೆಗೆ ಹೋಗುತ್ತಿದ್ದ ಸಂದರ್ಭ ಐವರ್ನಾಡು ಸಮೀಪ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ಅಪಘಾತಕ್ಕೀಡಾಗಿ ಸರಿತಾರವರು ರಸ್ತೆಗೆ ಬಿದ್ದರು. ಪರಿಣಾಮ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.