ಕರ್ನಾಟಕ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ದಿಗ್ವಿಜಯ ಭಾರಿಸಿದ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಜನತೆ ನೀಡಿದ ಆಶೀರ್ವಾದ. ಬಿಜೆಪಿಯವರ ಭ್ರಷ್ಟ ಆರೋಪಕ್ಕೆ ಈ ಫಲಿತಾಂಶ ಉತ್ತರ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲುವಂತೆ ಮಾಡಲು ಆಗದ ಬಿಜೆಪಿಗರು ಇನ್ನಾದರೂ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಚಿಂತನೆ ಮಾಡಲಿ. ಆಡಳಿತ ಪಕ್ಷವನ್ನು ಆಡಳಿತ ಮಾಡಲು ಜನರು ಆಶೀರ್ವದಿಸಿದ್ದಾರೆ.
ಕೇರಳದ ವಯನಾಡು ಉಪ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವಾಗಿದೆ. ಜಾರ್ಖಂಡ್ ರಾಜ್ಯದ ಚುನಾವಣೆಯಲ್ಲಿ ಗೆಲುವು ನಮ್ಮದಾಗಿದೆ. ಜಾತ್ಯಾತೀತ, ಪ್ರಜಾಪ್ರಭುತ್ವ, ಸಂವಿಧಾನ ಬದ್ಗಧ ದೇಶದಲ್ಲಿ ಜಾತಿ – ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲವನ್ನು ಭಾರತೀಯ ಜನತಾಪಾರ್ಟಿ ಯವರು ಇನ್ನಾದರೂ ಬಿಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ತಿಳಿಸಿದ್ದಾರೆ.