13 ನಿರ್ದೇಶಕ ಸ್ಥಾನಗಳಿಗೆ 31 ಮಂದಿ ಅಭ್ಯರ್ಥಿಗಳು ಕಣದಲ್ಲಿ
ಜೊತೆಯಾಗಿ ನಿಂತು ಮತಯಾಚಿಸುತ್ತಿರುವ ಎಲ್ಲಾ ಅಭ್ಯರ್ಥಿಗಳು
ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಆರಂಭಗೊಂಡಿದ್ದು, 13 ಮಂದಿ ನಿರ್ದೇಶಕರ ಸ್ಥಾನಕ್ಕೆ 31 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಆರು, ಸಾಲಗಾರರಲ್ಲದ ಕ್ಷೇತ್ರದಿಂದ ಒಂದು, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಎರಡು, ಹಿಂದುಳಿದ ವರ್ಗ ಎ ಹಾಗೂ ಬಿ ಕ್ಷೇತ್ರದಿಂದ ತಲಾ ಒಂದು, ಪರಿಶಿಷ್ಟ ಪಂಗಡ ಮತ್ತು ಜಾತಿ ಕ್ಷೇತ್ರದಿಂದ ತಲಾ ಒಂದು ಸೇರಿದಂತೆ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಬೇಕಾಗಿದೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ 253 ಮಂದಿ ಮತದಾರರು ಹಾಗೂ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ 2087 ಮಂದಿ ಮತದಾರು ಸೇರಿದಂತೆ ಒಟ್ಟು 2,340 ಮಂದಿ ಮತದಾರರಿದ್ದಾರೆ.
ಎನ್.ಸಿ. ಅನಂತ್ ಊರುಬೈಲು ಅವರ ನೇತೃತ್ವದ ಬಿಜೆಪಿ ಬೆಂಬಲಿತ 13 ಮಂದಿ ಅಭ್ಯರ್ಥಿಗಳು ಹಾಗೂ ಪಿ.ಎಲ್. ಸುರೇಶ್ ಕೊಡಗು ಸಂಪಾಜೆ ನೇತೃತ್ವದ ಕಾಂಗ್ರೆಸ್ ಬೆಂಬಲಿತ 13 ಮಂದಿ ಅಭ್ಯರ್ಥಿಗಳು ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 31 ಮಂದಿ ಕಣದಲ್ಲಿದ್ದು, ಎರಡೂ ಪಕ್ಷದವರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಜೊತೆ ಜೊತೆಗೆ ಶಾಸಕಿ ನಿಂತು ಸದಸ್ಯ ಮತದಾರರಿಂದ ಮತಯಾಚನೆ ನಡೆಸುತ್ತಿದ್ದಾರೆ.
ಸಂಜೆ 4 ಗಂಟೆಯ ತನಕ ಮತದಾನ ಜರುಗಲಿದ್ದು, ಮತದಾನ ಮುಗಿದ ಬಳಿಕ ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ.