ಸುಳ್ಯದ ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿಗೆ ಜ.12ರಂದು ಚುನಾವಣೆ

0

ಮೊದಲ ದಿನ 4 ನಾಮಪತ್ರ ಸಲ್ಲಿಕೆ

ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಜ.12 ರಂದು ಚುನಾವಣೆ ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಜ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಎಂದು ಚುನಾವಣಾಧಿಕಾರಿಯಾಗಿರುವ ಸಹಕಾರ ಇಲಾಖಾಧಿಕಾರಿ ಶಿವಲಿಂಗಯ್ಯರು‌ ಮಾಹಿತಿ ನೀಡಿದ್ದಾರೆ

ಮೊದಲ ದಿನವಾದ ಇಂದು‌4 ನಾಮಪತ್ರ ಸಲ್ಲಿಕೆಯಾಗಿದ್ದು ಸಾಲರಹಿತ‌ ಕ್ಷೇತ್ರದಿಂದ ಶೈಲೇಶ್ ಅಂಬೆಕಲ್ಲು, ಬಿ ಮೀಸಲು‌ಕ್ಷೇತ್ರದಿಂದ ದೇವಿಪ್ರಸಾದ್ ಸುಳ್ಳಿ, ಸಾಮಾನ್ಯ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಭಟ್ ತಿಪ್ಪನಕಜೆ, ಈಶ್ವರಚಂದ್ರ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.