ಜೆ.ಜೆ.ಎಂ. ಕಾಮಗಾರಿ ವೇಳೆ ಪೈಪ್ ಒಡೆದು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಸುಳ್ಯ ನಗರದಲ್ಲಿ ಜೆ.ಜೆ.ಎಂ.ನೀರಿನ ಪೈಪು ಲೈನ್ ಅಳವಡಿಕೆಯ ಕಾಮಗಾರಿ ಕೆಲಸ ಕಲ್ಲುಮುಟ್ಲುವಿನ ಗುರುಂಪುವಿನಲ್ಲಿ
ನಡೆಯುತ್ತಿದ್ದು ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ ಪೈಪು ಲೈನ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸುಳ್ಯ ನಗರಕ್ಕೆ ಪಯಸ್ವಿನಿಯಿಂದ ನೀರು ಹಾಯಿಸುವ ಪೈಪು ಲೈನ್ ಒಡೆದು ಹೋಗಿ ರಾತ್ರಿ ರಸ್ತೆಯಲ್ಲಿ ವಿಪರೀತ ಪ್ರಮಾಣದಲ್ಲಿ ಮಳೆಗಾಲದಲ್ಲಿ ನೀರು ಹರಿದಂತೆ ಹರಿದು ಪಕ್ಕದಲ್ಲಿ ಇರುವ ಅಂಗಡಿ ಮತ್ತು ಮನೆಗಳಿಗೆ ನೀರು ನುಗ್ಗಿದೆ.
ಇದರಿಂದಾಗಿ ನಗರದ ಕೆಲವು ಏರಿಯಾಗಳಿಗೆ ನೀರು ಸರಬರಾಜು ಆಗುತ್ತಿಲ್ಲ.
ಹಿಟಾಚಿ ಬಳಸಿ ಕಾಂಕ್ರೀಟ್ ರಸ್ತೆ ತುಂಡರಿಸಿ ಮಣ್ಣು ತುಂಬಿಸಲಾಗಿದ್ದು ನೀರು ಹರಿದು ರಸ್ತೆಯೆಲ್ಲಾ ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಎದುರಿನಿಂದ ಬರುವ ವಾಹನಗಳಿಗೆ ಸೈಡ್ ಕೊಡಲಾಗದೆ ಆಗಾಗ ಬ್ಲಾಕ್ ಆಗಿ ಪ್ರಯಾಣಿಕರಿಗೆ ಕಿರಿ ಕಿರಿಯಾಗಿದೆ. ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಕೆಸರಿನಿಂದಾಗಿ ನಡೆದಾಡಲು ತೊಂದರೆ ಅನುಭವಿಸುವಂತಾಗಿದೆ.
ಜಲ ಜೀವನ್ ಮಿಷನ್ ಯೋಜನೆಯು ಸಂಪೂರ್ಣ ಕಾರ್ಯರೂಪಕ್ಕೆ ಬರಬೇಕಾದರೆ ಕಾಮಗಾರಿ ಪೂರೈಸುವ ವೇಳೆ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಕಿರಿ ಕಿರಿ ತೊಂದರೆ ತಪ್ಪುವಂತಿಲ್ಲ.