ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಮತ್ತು ವಿವಿಧ ಸಂಘ-ಸಂಸ್ಥೆಗಳ ಆಶಯದಲ್ಲಿ 2025 ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆಯಡಿಯಲ್ಲಿ ಕಡಬ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಜನವರಿ 4ರಂದು ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು.
ಇದರಲ್ಲಿ ಶಿವರಾಮ ಸಿ. ಚಾಮೆತ್ತಡ್ಕ ರವರ ಹಸು 24-28 ಲೀಟರ್ ಹಾಲು ಕೊಡುವುದನ್ನು ಪರಿಗಣಿಸಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಎರಡು ಗ್ರಾಂನ ಚಿನ್ನದ ಪದಕಕ್ಕೆ ಭಾಜನರಾದರು.