ಸುಳ್ಯದ ಪಿ.ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿಯ 7 ಸ್ಥಾನಗಳಿಗೆ ಜ.12ರಂದು ಚುನಾವಣೆ

0

7 ಸ್ಥಾನಗಳಿಗೆ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಜ.೧೨ ರಂದು ೭ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ೧೬ ಮಂದಿ ಕಣದಲ್ಲಿದ್ದಾರೆ. ಈಗಾಗಲೇ ೭ ಸ್ಥಾನಗಳಿಗೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು ೭ ಮಂದಿ ಅವಿರೋಧ ಆಯ್ಕೆಯಾಗಿರುತ್ತಾರೆ.
ತಾಲೂಕಿನ ಒಟ್ಟು ೧೪ ವಲಯಗಳಲ್ಲಿ ೨೩ ನಾಮಪತ್ರ ಸಲ್ಲಿಕೆಯಾಗಿರುತ್ತದೆ.


ಜಾಲ್ಸೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ ಮತ್ತು ಬಂಡಾಯ ಅಭ್ಯರ್ಥಿ ಸುರೇಶ್ ಕೆ, ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಮತ್ತು ಸ್ವತಂತ್ರ ಅಭ್ಯರ್ಥಿ ದೇವಿಪ್ರಸಾದ್ ಎಸ್. ರವರು ೨ ನಾಮಪತ್ರ ಸಲ್ಲಿಸಿದ್ದಾರೆ.


ಸುಳ್ಯ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮನಾಥ ಕೆ, ಬಂಡಾಯ ಅಭ್ಯರ್ಥಿ ಜ್ಞಾನೇಶ್ವರ ಶೇಟ್,ಬೆಳ್ಳಾರೆ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಶಾಲಾಕ್ಷಿ, ಎಣ್ಮೂರು ಪ.ಜಾತಿ ಮೀಸಲು ಕ್ಷೇತ್ರದಲ್ಲಿ ಭಾಗೀರಥಿ ಮುರುಳ್ಯ , ಕೊಲ್ಲಮೊಗ್ರು ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸವಿತಾ ಕೆ.ಜೆ, ಮಡಪ್ಪಾಡಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ್ ಪಿ, ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ, ಕಳಂಜ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈಶ್ವರಚಂದ್ರ ಎಂ, ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ, ಪಂಬೆತ್ತಾಡಿ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾಗಿ ಸುಬ್ರಹ್ಮಣ್ಯ ಭಟ್ ರವರು ೨ ನಾಮಪತ್ರ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಚ್ಚುತ ಕೆ, ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ ನಾಮಪತ್ರ ಸಲ್ಲಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅವಿನಾಶ್ ಡಿ.ಕೆ ಮತ್ತು ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು ರವರು ನಾಮಪತ್ರ ಸಲ್ಲಿಸಿರುತ್ತಾರೆ.


ಬೆಳ್ಳಾರೆ ,ಎಣ್ಮೂರು, ಕೊಲ್ಲಮೊಗ್ರ,ಮಡಪ್ಪಾಡಿ,ಕಳಂಜ, ಪಂಬೆತ್ತಾಡಿ,ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದಂತೆ ಜಾಲ್ಸೂರು, ನೆಲ್ಲೂರು ಕೆಮ್ರಾಜೆ, ಸುಳ್ಯ, ಆಲೆಟ್ಟಿ,ಐವರ್ನಾಡು, ಗುತ್ತಿಗಾರು ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು ೧೬ ಮಂದಿ ಕಣದಲ್ಲಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು ೫೪೯ ಮತದಾರರಿದ್ದಾರೆ. ಉಳಿದವುಗಳಲ್ಲಿ ಜಾಲ್ಸೂರು ಕ್ಷೇತ್ರ ೩೦, ನೆಲ್ಲೂರು ಕೆಮ್ರಾಜೆ ೩೬, ಸುಳ್ಯ ಕ್ಷೇತ್ರ ೪೧, ಬೆಳ್ಳಾರೆ ೧೨, ಎಣ್ಮೂರು ೨, ಕೊಲ್ಲಮೊಗ್ರ ೧೧, ಮಡಪ್ಪಾಡಿ ೩೧, ಆಲೆಟ್ಟಿ ೩೨, ಕಳಂಜ ೯, ಐವರ್ನಾಡು ೨೭, ಪಂಬೆತ್ತಾಡಿ ೫, ಸುಬ್ರಹ್ಮಣ್ಯ ೨, ಗುತ್ತಿಗಾರು ೧೨ ಮಂದಿ ಮತದಾರರಿದ್ದಾರೆ.