ಶ್ರೀರಾಮ ಸೇವಾ ಸಂಘ ಜಟ್ಟಿಪಳ್ಳ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಬಳಿಯಿಂದ ಮುಖ್ಯ ರಸ್ತೆ ಶ್ರೀರಾಂ ಪೇಟೆ ರಸ್ತೆ ಎರಡು ಬದಿಯಲ್ಲಿ ಸ್ವಚ್ಚತಾ ಅಭಿಯಾನ ಮೂಲಕ ಸ್ವಚ್ಚತಾ ಕೆಲಸವನ್ನು ಮಾಡಿದರು.
ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಉದ್ಘಾಟಿಸಿದರು.
ನಗರ ಪಂಚಾಯತ್ ಮಾಜಿ ಸದಸ್ಯ ರಮಾನಂದ ರೈ,ಶ್ರೀರಾಮ ಸೇವಾ ಸಂಘ ಅಧ್ಯಕ್ಷ ಹರಿಶ್ಚಂದ್ರ ಎಂ ಆರ್,ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಚಿತ್ರಲೇಖಾ ಮಡಪ್ಪಾಡಿ,ಹಾಗೂ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಮತ್ತು ಜಟ್ಟಿಪಳ್ಳ ಊರವರು ಭಾಗವಹಿಸಿದರು.
ಶ್ರೀರಾಮ ಸೇವಾ ಸಂಘದ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ ಸ್ವಾಗತಿಸಿ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಚತಾ ಅಭಿಯಾನ ಸುಳ್ಯ ನಗರ ಪಂಚಾಯತ್ ಸಹಕಾರ ನೀಡಿದರು.