ರಸ್ತೆಯಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಫೋನನ್ನು ವಾರಸುದಾರರಿಗೆ ಹಿಂತಿರುಗಿಸಿದ ಉಮೇಶ್ ನಾಯ್ಕ್ ಮಜಿಗುಂಡಿ

0

ಅರಂಬೂರಿನಿಂದ ಸುಳ್ಯದ ಕಡೆಗೆ ಬರುತ್ತಿರುವಾಗ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಮೊಬೈಲ್ ಫೋನೊಂದನ್ನು ಕಳೆದು ಕೊಂಡ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕ ಮೆರೆದ ಘಟನೆ ವರದಿಯಾಗಿದೆ.

ಅದೇ ರಸ್ತೆಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ಉಮೇಶ್ ನಾಯ್ಕ್ ಮಜಿಗುಂಡಿ ಯವರು ರಸ್ತೆಯಲ್ಲಿ ಬಿದ್ದಿದ್ದ ಫೋನನ್ನು ಗಮನಿಸಿದ್ದು ಹೆಕ್ಕಿ ತಂದು ಸುದ್ದಿ ಕಚೇರಿಯಲ್ಲಿ ತಂದು ಒಪ್ಪಿಸಿದರು.
ಬಳಿಕ ಸುದ್ದಿ ಕಚೇರಿಯಿಂದ ಉಮೇಶ್ ರವರು ಕಳೆದುಕೊಂಡ ವಾರಸುದಾರರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು.
ಮೂಲತಃ ಮಡಿಕೇರಿಯ ಶುಖೂರು ಎಂಬವರ ಮೊಬೈಲ್ ಆಗಿದ್ದು ಅದನ್ನು ಸುದ್ದಿ ಕಚೇರಿಯಲ್ಲಿ ಅವರಿಗೆ ಹಸ್ತಾಂತರ ಮಾಡಲಾಯಿತು. ಮಡಿಕೇರಿಯಿಂದ ಕಾಸರಗೋಡಿನ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಮಕ್ಕಳ ಕೈಯಿಂದ ಮೊಬೈಲ್ ಬಿದ್ದಿರುವುದಾಗಿ ಅವರು ತಿಳಿಸಿದರು.