ಮುರುಳ್ಯ ಗ್ರಾಮದ ಅಲೆಕ್ಕಾಡಿ ತರವಾಡಿನ ಹಿರಿಯರಾದ ದಿ.ಲಿಂಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಬಾಲಾಕ್ಕರವರು ಅಲ್ಪಕಾಲದ ಅಸೌಖ್ಯದಿಂದ ಅವರ ಸ್ವಗೃಹ ಮದಿಪು ಮನೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಪ್ರಗತಿ ಪರ ಕೃಷಿಕರಾಗಿದ್ದ ಅವರು ಶ್ರಮಜೀವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರ ರಾಗಿದ್ದರು.
ಮೃತರು ಪುತ್ರ ಪೆರುವಾಜೆ ಗ್ರಾಮ ಪಂಚಾಯತ್ ಗ್ರಾಮಾಧಿಕಾರಿ ಜಯಪ್ರಕಾಶ್ ಮದಿಪು, ಸೊಸೆ ಶಿಕ್ಷಕಿ ಭಾರತಿ ಜಯಪ್ರಕಾಶ್, ಪುತ್ರಿಯಾರಾದ ಕಲಾವತಿ ಈಶ್ವರ್ ನೆಕ್ರಾಜೆ, ಸುಲೋಚನಾ ಜನಾರ್ಧನ ಈಶ್ವರಮಂಗಲ, ಶಶಿಪ್ರಭಾ ಜಗನ್ನಾಥ್ ಮತ್ರಡಿ, ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.