ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ಯವರು ಮಾ.31 ರಂದು ಸೇವಾ ನಿವೃತ್ತಿ ಹೊಂದಿದರು.
ಈ ಸಂಸ್ಥೆಗೆ ೧೯೮೭ ರಲ್ಲಿ ಗುಮಾಸ್ತರಾಗಿ ಸೇರ್ಪಡೆಗೊಂಡ ಇವರು ೨೦೧೪ರಲ್ಲಿ ಹಿರಿಯ ಗುಮಾಸ್ತರಾಗಿ ಭಡ್ತಿಗೊಂಡರು. ೨೦೨೨ ರಲ್ಲಿ ಲೆಕ್ಕ ಪಾಲಕರಾಗಿ ಮುಂಭಡ್ತಿಗೊಂಡು ಕೊಲ್ಲಮೊಗ್ರು ಶಾಖೆಯಲ್ಲಿ ಬ್ರಾಂಚ್ ಮೆನೇಜರ್ ನಿಯುಕ್ತಿಗೊಂಡರು. ೨೦೨೩ರಿಂದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಸುಧೀರ್ಘ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತಿದ್ದಾರೆ. ವೃತ್ತಿಯೊಂದಿಗೆ ವಿವೇಕ ಜಾಗೃತ ಬಳಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದಾರೆ. ಪ್ರಸ್ತುತ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಹರಿಹರೇಶ್ವರ ಸಂಗಮ ಕ್ಷೇತ್ರ ಹರಿಹರ ಪಲ್ಲತಡ್ಕ ಇಲ್ಲಿನ ಇಲ್ಲಿನ ಟ್ರಸ್ಟ್ ನ ಸದಸ್ಯರಾಗಿದ್ದಾರೆ. ಎಲ್‌ಐಸಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಲ್ಲಮೊಗ್ರು ಗ್ರಾಮದ ಬಟ್ಟೋಡಿ ದಿಟ ಐತ್ತಪ್ಪ ಗೌಡ ಮತ್ತು ದಿಟ ದೀನಮ್ಮ ದಂಪತಿಗಳ ಪುತ್ರರಾಗಿರುವ ಇವರು ನಡುಮುಟ್ಲು ಮನೆತನದವರು . ಇವರ ಪತ್ನಿ ಕಿರಣ ಗೃಹಿಣಿ. .ಮಕ್ಕಳಾದ ಶಶಾಂಕ ಬಿ.ಸಿ ಮತ್ತು ಶ್ರಾವ್ಯ ಬಿ.ಸಿ ಸಾಫ್ಟ್ವೇರ್ ಇಂಜಿನಿಯರ್ ಗಳಾಗಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.