Home Uncategorized ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸಂಸ್ಕೃತ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸಂಸ್ಕೃತ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಸುಳ್ಯದ ಸ್ನೇಹ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ನಾಲ್ಕನೇ ಬಾರಿಯೂ ಸಂಸ್ಕೃತ ಭಾರತಿಯವರ ಪರೀಕ್ಷೆಯಲ್ಲಿ 85 ಶೇಕಡಾ ಅಂಕಗಳೊಡನೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೊನೆಯ ‘ ಕೋವಿದ ‘ ಪರೀಕ್ಷೆಯ ಫಲಿತಾಂಶ ಯುಗಾದಿಯ ಸಂಭ್ರಮದ ನಡುವೆ ಬಂಡಿದೆ. ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕೃತ ಕಲಿಸುವ ಉದ್ದೇಶದಿಂದಲೇ ಈ ಸಾಹಸಕ್ಕೆ ಇಳಿದದ್ದು ಸಫಲವಾಗಿದೆ.

ಅವರ ಸಂಸ್ಕೃತ ಅಧ್ಯಯನ ಎರಡು ವರ್ಷಗಳ ಹಿಂದೆ ಆರಂಭವಾಗಿದೆ. ಪರೀಕ್ಷೆಗಳು ಆರು ತಿಂಗಳಿಗೊಮ್ಮೆ ನಡೆಯುತ್ತವೆ. ಮೊದಲ ಪರೀಕ್ಷೆ ‘ ಪ್ರವೇಶ ‘ ದಲ್ಲಿ 85 ಶೇಕಡಾ, ಎರಡನೇ ‘ ಪರಿಚಯ ‘ ಪರೀಕ್ಷೆಯಲ್ಲಿ 87 ಶೇಕಡಾ ಮತ್ತು ಮೂರನೇ ‘ ಶಿಕ್ಷಾ ‘ ಪರೀಕ್ಷೆಯಲ್ಲಿ 85 ಶೇಕಡಾ ಅಂಕಗಳನ್ನು ಗಳಿಸಿದ್ದು ಈಗ ಕೊನೆಯ ಪರೀಕ್ಷೆಯಲ್ಲಿಯೂ ಅದೇ ಮಟ್ಟ ಉಳಿಸಿಕೊಂಡಿದ್ದಾರೆ.

64 ರ ಪ್ರಾಯದಲ್ಲಿ ಹಠಹಿಡಿದು ಮಾಡಿದ ಪ್ರಯತ್ನವು ವಿದ್ಯಾರ್ಥಿಗಳಿಗೆ ಅನುಕರಣೀಯ.

NO COMMENTS

error: Content is protected !!
Breaking