Home Uncategorized ಪಂಜದ ಪಾಂಡಿಗದ್ದೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್

ಪಂಜದ ಪಾಂಡಿಗದ್ದೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್

0

ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂಬರ್ 128ರಲ್ಲಿ ಅನುದಾನ ತಾರತಮ್ಯ ಎಂದು ಮತದಾನ ಬಹಿಷ್ಕಾರ ಬ್ಯಾನರ್ ಪಂಜ ಐವತ್ತೊಕು ವಾರ್ಡ್ 02ರ ಮತದಾನ ಬಾಂದವರ ಹೆಸರಲ್ಲಿ ಪೊಳೆಂಜ ಸಮೀಪ ಪಾಂಡಿಗದ್ದೆಯಲ್ಲಿ ಅಳವಡಿಸಿರುವ ಘಟನೆ ಎ.1 ವರದಿಯಾಗಿದೆ.

ಸುಳ್ಯ ತಾಲ್ಲೂಕಿನ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪಾಂಡಿಗದ್ದೆ ಸರಕಾರ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಹೋಗುವಂತಹ ಪೊಳೆಂಜ -ಪಾಂಡಿಗದ್ದೆ ರಸ್ತೆಗೆ ಸುಮಾರು 20 ವರ್ಷಗಳಿಂದ ಚುನಾವಣೆ ಸಂದರ್ಭಗಳಲ್ಲಿ ಮತ ಬಿಕ್ಷೆ ಕೇಳಿ ಅಶ್ವಾಸನೆ ಕೊಟ್ಟು ಗೆದ್ದ ಜನಪ್ರತಿನಿಧಿಗಳು ಈ ವರೆಗೂ ಅಭಿವೃದ್ಧಿ ಪಡಿಸಿಲ್ಲ. ಮುಖ್ಯ ಮಂತ್ರಿಗಳ ವಿಶೇಷ ಅನುದಾನದಿಂದ ಬಂದ ಅನುದಾನವನ್ನು ಬೇರೆ ಊರಿಗೆ ಹಾಕಲಾಗಿದೆ. ಮತ್ತು ಕೊಂಟೇಲು- ನಾಗೋಡಿ -ಬೊಳ್ಳಾಜೆ ರಸ್ತೆ ಅಭಿವೃದ್ದಿಗೆ ಅನೇಕ ವರ್ಷಗಳಿಂದ ಅನುದಾನದಿಂದ ವಂಚನೆಗೆ ಒಳಗಾಗಿದೆ ಎಂದು ಮೊದಲಾದ ವಿಚಾರಗಳು ಬ್ಯಾನರ್ ನಲ್ಲಿ ಇದೆ.

NO COMMENTS

error: Content is protected !!
Breaking