ಜ.14,15 : ಕೊಡಿಯಾಲ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನೇಮೋತ್ಸವ – ಆಮಂತ್ರಣ ಬಿಡುಗಡೆ

0

ಕೊಡಿಯಾಲದ ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನಾಗತಂಬಿಲ, ಆಶ್ಲೇಷ ಬಲಿ ಮತ್ತು ಶ್ರೀ ಉಳ್ಳಾಕುಲು, ಚಾಮುಂಡಿ‌ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವವು ಜ.14 ಮತ್ತು ಜ.15 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ನಡೆಯಿತು.

ಜ.13 ರಂದು ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಉಡುಪಿ ಶ್ರೀ ರಾಮ ತೀರ್ಥ ಮಠ ಕಾಣಿಯೂರು, ಇವರು ಆಶೀರ್ವಚನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜ.14 ರಂದು ಆಶ್ಲೇಷ ಬಲಿ , ನಾಗತಂಬಿಲ ನಡೆಯಲಿದೆ.


ಜ.15ರಂದು ಶ್ರೀ ಉಳ್ಳಾಕುಲು, ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ.


ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ ಕಲ್ಪಡ, ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ. ಎಂ., ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷನ್ ಕೆ. ಟಿ., ಯುವರಾಜ, ಕೇಶವ ತೋಟ, ಬಾಲಕೃಷ್ಣ ಗೌಡ ಪೋಳಾಜೆ, ಧರ್ಮಪಾಲ, ಭಾಸ್ಕರ ಗುತ್ತು, ಲೋಕೇಶ್ ತಾಳಿತ್ತಡಿ, ನಾಗರಾಜ ಕಣಿಲೆಗುಂಡಿ, ಸುಂದರ ಗೌಡ ಪೋಳಾಜೆ, ಪ್ರಸಾದ್ ಕಲ್ಪಡ, ಪದ್ಮನಾಭ ಗುತ್ತು, ಉಪಸ್ಥಿತರಿದ್ದರು.