ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯ ಅರಂತೋಡು ಕಾರ್ಯಕ್ಷೇತ್ರದ ಮಲ್ಲಿಕಾರ್ಜುನ ವಾಕ್ಸಲ್ಯ ಸಂಘದ ಸದಸ್ಯೆ ಜಯಲಕ್ಷ್ಮಿ ಉಳುವಾರು ಇವರಿಗೆ ಪಾಶ್ವವಾಯು ತಗಲಿ ಓಡಾಡಲು ಕಷ್ಟವಾದ ಕಾರಣ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಣ್ಯರಾದ ರಾಮಚಂದ್ರ ಕಲ್ಲಗದ್ದೆ, ಅರಂತೋಡು ಒಕ್ಕೂಟ ಅಧ್ಯಕ್ಷರಾದ ರತ್ನಾವತಿ ಅಳಿಕೆ , ಸಂಪಾಜೆ ವಲಯ ಮೇಲ್ವಿಚಾರಕರಾದ ಗಂಗಾಧರ್, ಅರಂತೋಡು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸುಪ್ರಿತ ಕೆ. ಹಾಗೂ ಶೇಷಪ್ಪ ಗೌಡ, ಮೋಹನಾಂಗಿ ಉಪಸ್ಥಿತರಿದ್ದರು.