ಆಲೆಟ್ಟಿ ಪಂಜಿಮಲೆಯಲ್ಲಿ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ವರ್ಷಂಪ್ರತಿ ಜರುಗುವ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತವು ಇಂದು ಬೆಳಗ್ಗೆ ನೆರವೇರಿತು.
ಗುಂಡ್ಯ ವಯನಾಟ್ ಕುಲವನ್ ದೈವಸ್ಥಾನದಿಂದ ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ದೈವದ ಭಂಡಾರ ಒತ್ತೆಕೋಲ ಮಜಲಿಗೆ ಆಗಮಿಸಿ ಕೊಳ್ಳಿ ಮುಹೂರ್ತವವನ್ನು ನೆರವೇರಿಸಲಾಯಿತು.
ತೀಯ ಸಮಾಜದ ದೈವದ ಕರ್ಮಿಗಳು ಕೊಳ್ಳಿ ಮುಹೂರ್ತದ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನಡೆಸಿದರು. ಬಳಿಕ ಶ್ರೀ ವಿಷ್ಣುಮೂರ್ತಿ ಹಾಗೂ ಶ್ರೀವಯನಾಟ್ ಕುಲವನ್ ದೈವದ ಪಾತ್ರಿಯವರು ಭಕ್ತಾದಿಗಳಿಗೆ ಅಭಯ ನೀಡಿ ಅರಸಿನ ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ಸದಾಶಿವ ದೇವಸ್ಥಾನದ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ, ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ರತ್ನಾಕರ ಗೌಡ ಕುಡೆಕಲ್ಲು, ಸುಧಾಮ ಆಲೆಟ್ಟಿ, ಪ್ರಸನ್ನ ಕೆ.ಸಿ ಬಡ್ಡಡ್ಕ, ಅಚ್ಚುತ ಮಣಿಯಾಣಿ ಆಲೆಟ್ಟಿ, ಯೋಗೀಶರಾಮ ಗುಂಡ್ಯ, ದಯಾನಂದ ಪತ್ತುಕುಂಜ, ಉದಯಕುಡೆಕಲ್ಲು, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಕೋಶಾಧಿಕಾರಿ ಶ್ರೀನಾಥ್ ಆಲೆಟ್ಟಿ, ಬೊಳ್ಳುಕುಂಞ ಗುಂಡ್ಯ, ಮಾಧವ ಜಿ. ಬೆಳ್ಚಪ್ಪಾಡ,
ಶೇಷಪ್ಪ ಗೌಡ ಗುಂಡ್ಯ, ಪವಿತ್ರನ್ ಗುಂಡ್ಯ, ಮಾಧವ ಗುಂಡ್ಯ, ನವೀನ್ ಗುಂಡ್ಯ, ರಾಧಾಕೃಷ್ಣ ಗುಂಡ್ಯ, ನವೀನ್ ಕುಮಾರ್ ಆಲೆಟ್ಟಿ, ಚಂದ್ರಶೇಖರ ಆಲೆಟ್ಟಿ, ವಿಜಯ ಕುಮಾರ್ ಆಲೆಟ್ಟಿ, ಅವಿನ್ ಆಲೆಟ್ಟಿ, ಶರತ್ ಕುಡೆಕಲ್ಲು, ವಸಂತ ಆಲೆಟ್ಟಿ, ಯತಿರಾಜ್ ಭೂತಕಲ್ಲು, ಜನಾರ್ದನ ಗೌಡ ಗುಂಡ್ಯ, ಅಶ್ವಥ್ ಆಲೆಟ್ಟಿ, ಮಿಥುನ್ ಆಲೆಟ್ಟಿ, ಲಿಂಗಪ್ಪ ಭಂಡಾರಿ ಮೊರಂಗಲ್ಲು ಹಾಗೂ ಪರಿಸರದ ಭಕ್ತಾದಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಭಾರತೀಯ ತೀಯ ಸಮಾಜದ ಬಾಂಧವರು ಸಹಕರಿಸಿದರು.