ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಘಟಕ ಮತ್ತು ಕರ್ನಾಟಕ ರಾಜ್ಯ ಆದಿ ದ್ರಾವಿಡ ಮಹಿಳಾ ಸಮಾಜ ಸೇವಾ ಸಂಘ ಸುಳ್ಯ ಘಟಕ ಇದರ ತಾಲೂಕು ಸಮಿತಿಯ ನೇತೃತ್ವದಲ್ಲಿ ನೂತನ ಯುವ ವೇದಿಕೆಯ ತಾಲೂಕಿನಲ್ಲಿ ನೂತನ ಯುವ ವೇದಿಕೆಯ ಸಮಿತಿಯನ್ನು ಜ.6 ರಂದು ಸುಳ್ಯದ ಕೆ.ವಿ.ಜಿ ಪುರಭವನ ದಲ್ಲಿ ರಚಿಸಲಾಯಿತು.
ಈ ನೂತನ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಬೂಡುಮಕ್ಕಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೊಯಿಲ,ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ ಮಡಪ್ಪಾಡಿ, ಜತೆ ಕಾರ್ಯದರ್ಶಿಯಾಗಿ ಚರಣ್ ಮುಳ್ಯ ಅಟ್ಲೂರು, ಕೋಶಾಧಿಕಾರಿಯಾಗಿ ಗಣೇಶ್ ಸಂಪಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರ್ಷಿತ್ ಉಬರಡ್ಕ, ಸದಸ್ಯರುಗಳಾಗಿ ಭರತ್ ದ್ರಾವಿಡ್ ಕಲ್ತಡ್ಕ, ವಿನೋದ್ ಸಂಪಾಜೆ, ಪುರುಷೋತ್ತಮ ದೊಡಡ್ಕ, ದಿವ್ಯೇಶ್ ಕಿಲಂಗೋಡಿ, ಕುಶಾಲ ಅಜ್ಜಾಮೂಲೆ, ಶಿವಪ್ರಸಾದ್ ಮೊರಂಗಲ್ಲು, ಮಂಜುನಾಥ ಮರ್ಕಂಜ, ಚೇತನ್ ಮಠತ್ತಡ್ಕ,ಶ್ರವಣ್ ಕುಮಾರ್ ಕೊಡಿಯಾಲಬೈಲ್,ವಸಂತ ಕೊಡಿಯಾಲಬೈಲ್,ರಾಜೀವ್ ನಾವೂರು,ರಾಜು.ಕೆ.ಪಿ. ಜಾಲ್ಸೂರು , ಹರೀಶ್ ಬೂಡು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ದೊಡ್ಡೇರಿ, ಸ್ಥಾಪಕಾಧ್ಯಕ್ಷರಾದ ಬಾಬು ಜಾಲ್ಸೂರು, ಗೌರವಾಧ್ಯಕ್ಷರಾದ ಮೋನಪ್ಪ ರಾಜಾರಾಂಪುರ, ಕಾನೂನು ಸಲಹೆಗಾರರಾದ ಚನಿಯ ಕಲ್ತಡ್ಕ,ಗೌರವ ಸಲಹೆಗಾರರಾದ ಚೋಮ ನಾವೂರು, ಜಿಲ್ಲಾ ಸಮಿತಿಯ ಸದಸ್ಯರಾದ ವಿಜಯ ಆಲಡ್ಕ. ತಾಲೂಕು ಉಪಾಧ್ಯಕ್ಷರಾದ ನರ್ಸಪ್ಪ ಮಡಪ್ಪಾಡಿ, ಜಗನ್ನಾಥ ಮಠತ್ತಡ್ಕ, ಕೋಶಾಧಿಕಾರಿಯಾದ ಶಿವಪ್ಪ ಕೊಡ್ತೀಲು, ಮತ್ತು ತಾಲೂಕು ಮಹಿಳಾ ಸಮಿತಿಯ ಅಧ್ಯಕ್ಷರಾದ ಕುಸುಮ ಬಿಳಿಯಾರು, ಕಾರ್ಯದರ್ಶಿ ನಂದಿನಿ ಕೊಡ್ತೀಲು, ಸಾಂಸ್ಕೃತಿಕ ಕಾರ್ಯದರ್ಶಿಯಾದ ಮಮತಾ ಮುಳ್ಯ ಸದಸ್ಯರಾದ ರಾಮಚಂದ್ರ ಕೊಯಿಲ, ಗೋಪಾಲ ಮರ್ಕಂಜ ಹಾಗೂ ಸಮುದಾಯದವರು ಉಪಸ್ಥಿತರಿದ್ದರು.