ದ.ಕ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿಫೆಬ್ರವರಿ 1 ರಂದು ಮಂತ್ರವಾದಿ ಗುಳಿಗ ದೈವ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕೊರಗಜ್ಜ ದೈವದ ಸನ್ನಿಧಿ ಕೈಪಡ್ಕ ದಲ್ಲಿ ಜ 5 ರಂದು ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷರು ಸುರೇಶ್ ಕದಿಕಡ್ಕ, ಅಧ್ಯಕ್ಷರು ರವಿಚಂದ್ರ ಬಿಳಿಯಾರು, ಕಾರ್ಯದರ್ಶಿ ರಮೇಶ್ ಹುಲ್ಲು ಬೆಂಕಿ, ಖಜಾಂಜಿ ಚಂಗಪ್ಪ ಕೈಪಡ್ಕ , ಶ್ರೀಧರ ದುಗ್ಗಳ, ರಾಜ ಗೋಪಾಲ ಉಳುವಾರು, ಲೋಕ್ಯಾನಾಯ್ಕ್ , ಪಿ. ಆರ್ ನಾಗೇಶ್ ಪೇರಾಲು, ಯೋಗೇಶ್ವರ ಕೈಪಡ್ಕ, ಪ್ರಶಾಂತ್ ಹಾಗೂ ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.