ಅಸೌಖ್ಯದಿಂದ ಯುವಕನೋರ್ವ ಮೃತಪಟ್ಟ ಘಟನೆ ಮರ್ಕಂಜದಿಂದ ವರದಿಯಾಗಿದೆ.
ಮರ್ಕಂಜ ಗ್ರಾಮದ ಕಾಯರ ಮೋಹನ ಗೌಡ ಎಂಬವರ ಪುತ್ರ ವಿಶಾಲ್ ಮೃತಪಟ್ಟ ವ್ಯಕ್ತಿ. ವಿಶಾಲ್ರಿಗೆ 2 ದಿನಗಳ ಹಿಂದೆ ಅಸೌಖ್ಯ ಬಾಧಿಸಿದ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟರೆಂದು ತಿಳಿದುಬಂದಿದೆ.
ಅವರಿಗೆ 37 ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ ಪುಷ್ಪಲತಾ, ಪತ್ನಿ ತುಳಸಿ, ಪುತ್ರ ಅದ್ವಿಕ್, ಸಹೋದರ ಕೌಶಿಕ್, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಕಾಯರ ಮನೆಯಲ್ಲಿ ನಡೆಯಲಿದೆ.