ಐವರ್ನಾಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಎಸೋಸಿಯೇಟ್ ಜಯರಾಮ ನಾಯಕ್ ರವರು ಸುದೀರ್ಘ ಸೇವೆ ಸಲ್ಲಿಸಿ ಡಿ.31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ.
ಭಾರತೀಯ ವಾಯು ಸೇನೆಯ ರಕ್ಷಣಾ ದಳದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಇವರು ಸ್ಟೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಸೇರ್ಪಡೆಗೊಂಡಿದ್ದರು.
ಪ್ರಾರಂಭದಲ್ಲಿ ಮಂಡ್ಯ ಜಿಲ್ಲೆ ಮಳವಲ್ಲಿ ಸ್ಟೇಟ್ ಬ್ಯಾಂಕ್ ನಲ್ಲಿ 5 ವರ್ಷ ಸೇವೆ ಸಲ್ಲಿಸಿ ಅಲ್ಲಿಂದ ವರ್ಗಾವಣೆಗೊಂಡು ನಂತರ ಹಾಸನದ ಹೆತ್ತೂರು ಸ್ಟೇಟ್ ಬ್ಯಾಂಕಿನಲ್ಲಿ 3 ವರ್ಷ ಸೇವೆ ಸಲ್ಲಿಸಿ ಬಳಿಕ ಪದೋನ್ನತಿಗೊಂಡು
ಸುಳ್ಯದ ಐವರ್ನಾಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆಗೆ ವರ್ಗಾವಣೆಗೊಂಡು ಬಂದರು.
ಇಲ್ಲಿ 9 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಡಿ.31 ರಂದು ಸೇವಾ ನಿವೃತ್ತಿಗೊಂಡರು.
ಇವರು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕೊಡಂಗೆ ಮನೆಯವರಾಗಿದ್ದು ಇವರ ಪತ್ನಿ ಶ್ರೀಮತಿ ಮಲ್ಲಿಕಾರವರು ಗೃಹಿಣಿಯಾಗಿದ್ದಾರೆ.
ಪುತ್ರ ಶಮಂತ್ ಸಾಫ್ಟ್ ವೇರ್ ಡೆವಲಪರ್ ಆಗಿ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ.
ಪುತ್ರಿ ಸಾಕ್ಷಿ ಬೆಂಗಳೂರಿನ ಫೈನ್ ಆರ್ಟ್ ಕಾಲೇಜಿನಲ್ಲಿ ವಿಶ್ಯುವಲ್ ಆರ್ಟ್ ಕೋರ್ಸು ಮಾಡುತ್ತಿದ್ದಾರೆ.