ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿದ್ದ ಉಮೇಶ್ಚಂದ್ರ ಕೆ.ವಿ.ರವರು ಡಿ.31
ರಂದು ನಿವೃತ್ತರಾದರು.
ಸಂಪಾಜೆಯ ಗೂನಡ್ಕದವರಾದ ಉಮೇಶ್ಚಂದ್ರ ಕೆ.ವಿ ರವರು ದಿ.ಕಕ್ಕೆಬೆಟ್ಟು ವೆಂಕಪ್ಪಗೌಡ ಹಾಗು ದಿ. ಪದ್ಮಾವತಿ ಯವರ ಕೊನೆಯ ಪುತ್ರರಾಗಿ ಜನಿಸಿ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗೂನಡ್ಕ,ದಲ್ಲಿ, ಪ್ರೌಢ ಶಿಕ್ಷವನ್ನು ಸಂಪಾಜೆ ಪ್ರೌಢ ಶಾಲೆಯಲ್ಲಿ ಹಾಗೂ, ಪಿ.ಯು.ಸಿ. ವ್ಯಾಸಂಗವನ್ನು ಸತ್ಯ ಸಾಯಿ ಜೂನಿಯರ್ ಕಾಲೇಜು ಅಳಿಕೆಯಲ್ಲಿ ಮುಗಿಸಿ ತದನಂತರ ತನ್ನ ಎಂಜಿನೀಯರಿಂಗ್ ಪದವಿಯನ್ನು ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನೀಯರಿಂಗ್ ಕಾಲೇಜು ಮೈಸೂರಿನಲ್ಲಿ ಹಾಗೂ ಎಂ.ಬಿ.ಎ ಪದವಿಯನ್ನು ಸಿಕ್ಕಿಂ ಮಣಿಪಾಲ್ ಯುನಿವರ್ಸಿಟಿಯಲ್ಲಿ ಪಡೆದು, 1988 ರಿಂದ 2000 ರವರೆಗೆ ಗುಲಬರ್ಗ ಜಿಲ್ಲೆ ಶಹಾಪೂರ ತಾಲೂಕು ಹಾಗೂ ಸುಳ್ಯ ತಾಲೂಕಿನಲ್ಲಿ ಅಂದಿನ ಕೆ.ಇ.ಬಿ ಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿಯನ್ನು ಪ್ರಾರಂಭಿಸಿ,
2000 ರಲ್ಲಿ ಭಡ್ತಿ ಹೊಂದಿ2008 ರವರೆಗೆ ಸುಳ್ಯ ಹಾಗೂ ಮಂಗಳೂರಿನಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರಾಗಿ ಸೇವೆ ಸಲ್ಲಿಸಿ
2008 ರಲ್ಲಿ ಭಡ್ತಿ ಹೊಂದಿ 2018 ರವರೆಗೆ ಕಾರ್ಯ ನಿರ್ವಾಹಕ ಇಂಜಿನೀಯರ್ ಆಗಿ ಮಂಗಳೂರು ಹಾಗೂ ಬಂಟ್ವಾಳ ವಿಭಾಗದಲ್ಲಿ ಸೇವೆ ಸಲ್ಲಿಸಿ 2018 ರಲ್ಲಿ ಭಡ್ತಿಗೊಂಡು 2022 ರವರೆಗೆ ಅಧೀಕ್ಷಕ ಇಂಜಿನೀಯರ್ ಆಗಿ ಮಂಗಳೂರಿನ ಆಡಳಿತ ಕಛೇರಿ ಹಾಗು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ತದ ನಂತರ
2022 ರಲ್ಲಿ ಚೀಫ್ ಇಂಜಿನೀಯರ್ ಆಗಿ ಭಡ್ತಿ ಹೊಂದಿ ಮೈಸೂರು ( CESC ) ಕಂಪನಿಯಲ್ಲಿ ಸೇವೆ ಸಲ್ಲಿಸಿ2023 ರಲ್ಲಿ ಇವರ ಸೇವಾಹಿರಿತನ, ಕರ್ತವ್ಯ ನಿಷ್ಠೆ ಹಾಗೂ ಕಾರ್ಯತತ್ಪರತೆ ಯನ್ನು ಪರಿಗಣಿಸಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯ ತಾಂತ್ರಿಕ ನಿರ್ದೇಶಕರಾಗಿ ಸರಕಾರದಿಂದ ನೇಮಕ ಗೊಂಡು ತದನಂತರ 2024 ರಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಆಯ್ಕೆಗೊಂಡು ತನ್ನ 36 ವರ್ಷಗಳ ಕಾಲ ವಿದ್ಯುತ್ ಕ್ಷೇತ್ರದಲ್ಲಿ ಸುಧೀರ್ಘವಾದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ಡಿ.31ರಂದು ನಿವೃತ್ತಿಗೊಂಡಿರುತ್ತಾರೆ.
ತನ್ನ ಸೇವಾವಧಿಯಲ್ಲಿ ಮುಂಭಡ್ತಿ ಹೊಂದುತ್ತಾ ಹೊಂದುತ್ತಾ ಈ ಸ್ಥಾನಕ್ಕೆ ಏರಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರಿಂದ ಇಲಾಖಾ ವಿವಿಧ ಅಧಿಕಾರಿಯವರಿಂದ ಹಾಗೂ ಸಾರ್ವಜನಿಕರಿಂದ ವಿಶೇಷವಾದ ಪ್ರಶಂಶೆಗೆ ಪಾತ್ರರಾಗಿರುತ್ತಾರೆ.
ಇವರ ಪತ್ನಿ ಶ್ರೀಮತಿ ಸವಿತ.
ಮಗಳು ದೀಕ್ಷ ಹಾಗೂ ಅಳಿಯ ಸುಚೇತ್ ರವರು ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಹೋದರ ಕುಸುಮಾಧರ ಕೆ.ವಿ ಇವರು ಗೋಣಿಕೊಪ್ಪ ಕಾಲೇಜಿನ ಪ್ರಾಂಶುಪಾಲರಾಗಿ ಸೇವಿ ಸಲ್ಲಿಸಿ ಕಳೆದ 2 ವರ್ಷಗಳ ಹಿಂದೆಯಷ್ಟೇ ನಿವೃತ್ತಿಗೊಂಡಿರುತ್ತಾರೆ.