ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರ ಮತ್ತು ಭಜನಾ ತರಬೇತಿ ಕೇಂದ್ರದ ವಿದ್ಯಾರ್ಥಿ ಗಳೊಂದಿಗೆ , ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸೇವಾ ಪ್ರಮುಖರಾದ ನಾ. ಸೀತಾರಾಮರವರು ಜ ೫ ರಂದು ದೇವಾಲಯದ ಸಭಾಂಗಣದಲ್ಲಿ ನಡೆಸಿಕೊಟ್ಟರು.
ಧಾರ್ಮಿಕ ಶಿಕ್ಷಣ ಕೇಂದ್ರದ ಅಧ್ಯಕ್ಷ ದ್ರುವಕುಮಾರ್ ಕೇರ್ಪಡ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಭಾಗದ ಕಾರ್ಯವಾಹಕ ಶುಭಾಶ್ಚಂದ್ರ ಕಳಂಜ, ಸಂಚಾಲಕ ವಸಂತ ನಡುಬೈಲು, ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು ಪೋಷಕರು ಭಕ್ತಾದಿಗಳು ಭಾಗವಹಿಸಿದ್ದರು. ಪಾರ್ಥನೆ ಬಳಿಕ ವೀಳ್ಯ ನೀಡಿ ಸ್ವಾಗತಿಸಲಾಯಿತು. ಸುಹಾಸ್ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಮಧು ಯತೀಶ್ ಪಲ್ಲತಡ್ಕ ವಂದಿಸಿದರು.