ಆಲೆಟ್ಟಿ ಸೊಸೈಟಿ ಚುನಾವಣೆಗೆ ನಾಮಪತ್ರ ಸಲ್ಲಿಕೆ

0

ಪ್ರಥಮ ದಿನದಂದು 9 ನಾಮಪತ್ರ ಸಲ್ಲಿಕೆ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ.17 ರಂದು ಚುನಾವಣೆ ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡಿದೆ.


ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಪತಿ ಭಟ್ ಮಜಿಗುಂಡಿ, ಜಯಪ್ರಕಾಶ್ ಕುಂಚಡ್ಕ, ಸುಧಾಕರ ಆಲೆಟ್ಟಿ, ಹರಿಪ್ರಸಾದ್ ಕಾಪುಮಲೆ, ಚಿದಾನಂದ ಕೋಲ್ಚಾರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತೇಜಕುಮಾರ್ ಬಡ್ಡಡ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿದ್ಯಾ ಜಿ.ಆರ್, ಉಷಾ ಹೆಚ್ ಹಾಗೂ ಪ.ಪಂಗಡ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಮಜಿಗುಂಡಿ ಯವರು ನಾಮಪತ್ರ ಸಲ್ಲಿಸಿರುತ್ತಾರೆ.


ಜ.9 ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಜ.11 ರಂದು ನಾಮಪತ್ರ ಹಿಂಪಡೆಯಲು‌ಅವಕಾಶವಿರುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.