ಪಂಜದಲ್ಲಿ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ⬆️ ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡಲು ಭಗವಂತನು ಇನ್ನಷ್ಟು ಶಕ್ತಿ ನೀಡಲಿ-ರಾಕೇಶ್ ಮಲ್ಲಿ

0

ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರು ಮೆಚ್ಚುವ ಕೆಲಸ: ಮಾಡುತ್ತಿದ್ದಾರೆ:ವಿಜಯಕುಮಾರ್


ವೆಂಟಿಲೇಟರ್ ಅಂಬುಲೆನ್ಸ್ ದೇಣಿಗೆಗೆ ಕೈ ಜೋಡಿಸಿ: ಮಹೇಶ್ ಕುಮಾರ್


ಈಶ್ವರ್ ಮಲ್ಪೆ,ಡಾ.ರಾಮಯ್ಯ ಭಟ್, ಹರ್ಷಿತ್ ರವರಿಗೆ ಸನ್ಮಾನ


ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಆಶ್ರಯದಲ್ಲಿ ಪಂಚಶ್ರೀ ಜೀವ ರಕ್ಷಕ ಅಂಬ್ಯುಲೆನ್ಸ್ ನ 5ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 65 ಕೆ.ಜಿ ವಿಭಾಗದ ಸೂರ್ಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಚಶ್ರೀ ಟ್ರೋಫಿ-2025 , ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ
ಜ.4 ರಂದು ನಡೆಯಿತು.

ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬೆಂಗಳೂರು ಚೇರ್‌ಮೆನ್ ರಾಕೇಶ್ ಮಲ್ಲಿ
ಉದ್ಘಾಟಿಸಿ ಮಾತನಾಡಿ “ನಿರಂತರ ಸಮಾಜ ಮುಖಿ ಸೇವೆ ನೀಡುತ್ತಿದೆ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್. ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡಲು ಭಗವಂತನು ಇನ್ನಷ್ಟು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಮುಂದಿನ ದಿನ ಇನ್ನೊಂದು ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ಖರೀದಿಗಾಗಿ ಪಂದ್ಯಾಟ ಆಯೋಜಿಸಲಾಗಿದೆ. ” ಎಂದು ವಿವರಿಸಿದರು.
ನೂತನ ಅಧ್ಯಕ್ಷ ಹಿತೇಶ್ ಪಂಜದಬೈಲು ಮತ್ತು ನೂತನ ಪದಾಧಿಕಾರಿಗಳಿಗೆ
ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಪ್ರಮಾಣವಚನ ಬೋಧನೆ ಮಾಡಿದರು . ಬಳಿಕ ಅವರು
ಮಾತನಾಡಿ ” ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನವರು ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ.


ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ ಮಾತನಾಡಿ “ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಎಲ್ಲಾ ಕ್ಷೇತ್ರಗಳಲ್ಲೂ ಕೈ ಜೋಡಿಸಿ ಸೇವೆ ಸಲ್ಲಿಸಿ ರಾಜ್ಯ ಮಟ್ಟದಲ್ಲಿ ಕೀರ್ತಿ ಗಳಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ”. ಎಂದು ಹೇಳಿದರು.
ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್‌ ಕುಮಾರ್ ಕರಿಕ್ಕಳ ಮಾತನಾಡಿ ” ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನವರು ಅನೇಕ ಸಮಾಜ ಸೇವೆ ನೀಡುತ್ತಿದ್ದಾರೆ. ಮುಂದೆ ವೆಂಟಿಲೇಟರ್ ಇರುವ ಅಂಬ್ಯುಲೆನ್ಸ್ ಖರೀದಿಗೆ ದೇಣಿಗೆ ನೀಡುವ ಎಂದು ಹೇಳಿದರು.


ಪ್ರಗತಿ ಪರ ಕೃಷಿಕ ಶ್ರೇಯಾಂಸ್‌ ಕುಮಾರ್ ಶೆಟ್ಟಿಮೂಲೆ ಯವರು
ಹಿರಿಯ ಜನಪ್ರಿಯ ವೈದ್ಯ ಡಾ.ರಾಮಯ್ಯ ಭಟ್, ಭಾರತೀಯ ಭೂ ಸೇನೆಯ ಯೋಧ ಹರ್ಷಿತ್. ಎ.ಕೆ, ರವರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ನಿರ್ಣಾಯಕ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲು , ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಾಧವ ಬಿ.ಕೆ, ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್, ಯುವ ಜನ ಸಂಯುಕ್ತ ಮಂಡಳಿ ಪ್ರಧಾನ ಕಾರ್ಯದರ್ಶಿ ನಮಿತಾ ,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕಾರ್ಯದರ್ಶಿ ಶರತ್ ಕುದ್ವ, ಖಜಾಂಜಿ ದುರ್ಗಾಪ್ರಸಾದ್ ಅಂಬೆಕಲ್ಲು, ನೂತನ ಕಾರ್ಯದರ್ಶಿ ತಾರಾನಾಥ (ಶಶಿ) ದಾಸ್ ನಾಗತೀರ್ಥ, ನೂತನ ಖಜಾಂಜಿ ನವೀನ್ ನಾಗತೀರ್ಥ, ಕಬಡ್ಡಿ ಪಂದ್ಯಾಟದ
ಸಂಯೋಜಕ ಸತೀಶ್ ಕೆರೆಯಡ್ಕ, ವರ್ಷಿತ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಗತೀರ್ಥ ಪ್ರಾರ್ಥಿಸಿದರು. ಬಿಪಿನ್ ಸಂಕಡ್ಕ ಸ್ವಾಗತಿಸಿದರು. ಶರತ್ ಕುದ್ವ ವರದಿ ವಾಚಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.


ಪಂದ್ಯಾಟದ ಮಧ್ಯೆ ಆಗಮಿಸಿದ ಸಮಾಜ ಸೇವಕ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ರವರನ್ನು ಸನ್ಮಾನಿಸಲಾಯಿತು.ಪಂದ್ಯಾಟಕ್ಕೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಾಧವ ಬಿ ಕೆ , ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್, ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೋಕೇಶ್ ಬರೆಮೇಲು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ಸ್ವಾಗತಿಸಿದರು ಮತ್ತು ನಿರೂಪಿಸಿದರು.
ಬಳಿಕ ಪಂಜ ಪ್ರಾಥಮಿಕ ಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ,ನಾಗತೀರ್ಥ ಪ್ರಾಥಮಿಕ ಶಾಲೆ, ಅಲೆಕ್ಕಾಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪಂದ್ಯಾಟ ಆರಂಭ ಗೊಂಡಿತು.ಈ ಪಂದ್ಯಾಟದ ಬಳಿಕ 65 ಕೆ.ಜಿ ವಿಭಾಗದ ಪಂದ್ಯಾಟ ನಡೆಯಿತು.

ಸುದ್ದಿ ಯೂ ಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ನಡೆಯಿತು. ಪ್ರೇಕ್ಷಕರ ಅನುಕೂಲಕ್ಕಾಗಿ ಕ್ರೀಡಾಂಗಣ ಬಳಿ ದೊಡ್ಡ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗಿತ್ತು.