ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಎಲಿಮಲೆಯಲ್ಲಿ ಕಾರ್ಯಕರ್ತರ ಸಭೆ

0

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸುಳ್ಯ ಇದರ ವತಿಯಿಂದ ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಭಾದಿತ ಗ್ರಾಮಗಳ, ಮ.ಜ.ಹಿ.ರ.ವೇ ಯ ಕಾರ್ಯಕರ್ತರ ಸಭಾ ಕಾರ್ಯಕ್ರಮವು ಜ.2 ರಂದು ನೆಲ್ಲೂರು ಕೆಮ್ರಾಜೆ ಸೊಸೈಟಿ ಹಾಲ್ ನಲ್ಲಿ ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಕಾರ್ಯಕ್ರಮ ಉದ್ಘಾಟಿಸಿ ಸುಭಾಶ್ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶ್ರೀಮತಿ ಪುಷ್ಪಾಮೇದಪ್ಪ ವಂದೇಮಾತರಂ ಗೀತೆ ಹಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವೆಂಕಟ್ ದಂಬೆಕೋಡಿ, ಭರತ್ ಮುಂಡೋಡಿ ಅರಣ್ಯ ಇಲಾಖೆಯ ಕಾಯ್ದೆಗಳು ಹಾಗೂ ಅದರ ಸಾಧಕ- ಬಾಧಕ ಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಸಭಾಕಾರ್ಯಕ್ರಮದ ಸಂಘಟನೆಯ ಸಂಚಾಲಕರಾದ ಕಿಶೋರ್ ಶಿರಾಡಿ ಅವರು ಸಂಘಟನಾತ್ಮಕ ವಿಚಾರ ಹಾಗೂ ಅರಣ್ಯ ಇಲಾಖೆಯ ಕಾಯ್ದೆಗಳು ಹಾಗೂ ಜನಸಾಮಾನ್ಯರ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ , ಸೆ. 8 ರಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿಯ ಮುಂದೆ ನಡೆಯುವ ಹಕ್ಕೊತ್ತಾಯ ಪ್ರತಿಭಟನೆಯ ವಿಚಾರವಾಗಿ ಮಾಹಿತಿಗಳನ್ನು ನೀಡಿದರು.


ಸುಳ್ಯ ತಾಲೂಕಿನ ಸುಮಾರು 14 ಗ್ರಾಮದ ಗ್ರಾಮಸ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮ.ಜ.ಹಿ.ರ.ವೇ ಯ ಸುಳ್ಯ ತಾಲೂಕಿನ ಸಂಚಾಲಕರಾದ ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.