ಪೆರುವಾಜೆ ಶಾಲಾ ಮುಖ್ಯೋಪಾಧ್ಯಾಯ ತೇಜಪ್ಪ ಎಸ್.ಸಂಪ್ಯಾಡಿ ನಿವೃತ್ತಿ – ಸನ್ಮಾನ, ಬೀಳ್ಕೊಡುಗೆ

0

ತೇಜಪ್ಪ ಮಾಸ್ತರ್ ಭಾಷಾ ಕೌಶಲ್ಯದಲ್ಲಿ ಮುಂದುವರಿದವರು : ಶಿವಶಂಕರ ಭಟ್

ಅಪ್ಪಟ ಪ್ರಾಮಾಣಿಕ ಶಿಕ್ಷಕ : ರಾಮಕೃಷ್ಣ ಮಲ್ಲಾರ

ನಾಯಕತ್ವ ಗುಣ ಮೈಗೂಡಿಸಿಕೊಂಡವರು : ಶ್ರೀಧರ್

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್.ಸಂಪ್ಯಾಡಿಯವರು ಡಿ.೩೧ ರಂದು ಸೇವಾ ನಿವೃತ್ತಿ ಹೊಂದಿದ್ದು, ಇವರಿಗೆ ಶಾಲೆಯಲ್ಲಿ ಸನ್ಮಾನ ಹಾಗೂ ಬೀಳ್ಕೊಡುವ ಕಾರ್ಯಕ್ರಮವು ನಡೆಯಿತು.


ಶಾಲಾ ಶಿಕ್ಷಕರ ವತಿಯಿಂದ ತೇತಪ್ಪ ಎಸ್ ಮತ್ತು ಶ್ರೀಮತಿ ಶೀಲಾವತಿ ದಂಪತಿಯನ್ನು ಶಾಲು ಹೊದಿಸಿ, ಫಲ, ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಲಾ ಸಹೋದ್ಯೋಗಿ ಶಿಕ್ಷಕರಾದ ಶ್ರೀಮತಿ ಲಲಿತ,ಶ್ರೀಮತಿ ರತ್ನಾವತಿ, ಶ್ರೀಮತಿ ಶ್ರುತಿ, ಶ್ರೀಮತಿ ಲೀಸಾ, ಶ್ರೀಮತಿ ಭವ್ಯರವರನ್ನು ತೇಜಪ್ಪ ಸಂಪ್ಯಾಡಿಯವರು ಕೃತಜ್ಞತಾ ಪತ್ರ ನೀಡಿ ಗೌರವಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಪ್ಪ ಮಾಸ್ತರ್‌ರವರು, ತಾನು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಸುದೀರ್ಘ ೩೦ ವರ್ಷಗಳ ಕಾಲ ವಿವಿಧ ಕಡೆಯ ಶಾಲೆಗಳಲ್ಲಿ ಸೇವೆ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ಅಂಡಿಂಜೆ ಶಾಲಾ ಮುಖ್ಯ ಶಿಕ್ಷಕ ಶಿವಶಂಕರ ಭಟ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ, ಉಪಾಧ್ಯಕ್ಷ ಕುಶಾಲಪ್ಪ, ತಾಲೂಕು ಸರಕಾರಿ ನೌಕರರ ಸಂಘದ ಖಜಾಂಜಿ ಕುಶಾಲಪ್ಪ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಶಿಕ್ಷಣ ಸಂಯೋಜಕಿ ಶ್ರೀಮತಿ ಧನಲಕ್ಷ್ಮೀ ಕುದ್ಪಾಜೆ, ಬೆಳ್ಳಾರೆ ಕ್ಲಸ್ಟರ್ ಸಿ.ಆರ್.ಪಿ. ಶ್ರೀಮತಿ ಅನುರಾಧ, ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ, ಬೆಳ್ಳಾರೆ ಕೆ.ಪಿಎಸ್ ನ ಪ್ರಾಥಮಿಕ ಶಾಲಾ ಮುಖ್ಯಗುರು ಮಾಯಿಲಪ್ಪರವರು ಉಪಸ್ಥಿತರಿದ್ದು ಶುಭಹಾರೈಸಿದರು.


ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಖಜಾಂಜಿ ಶೀಲಾವತಿ, ಸಂಘಟನಾ ಕಾರ್ಯದರ್ಶಿ ಸರೋಜಿನಿ, ಗ್ರಾಮ ಪಂಚಾಯತ್ ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಮತ್ತಿತರರು ಶುಭಹಾರೈಸಿ ಮಾತನಾಡಿದರು.


ವಿದ್ಯಾರ್ಥಿಗಳಾದ ಆತ್ಮೀಯ, ಅಕ್ಷತರವರು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಶೃತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.