ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಪದ್ಮವೇಣಿ ಡಿ. 31 ರಂದು ಸೇವಾ ನಿವೃತ್ತಿ ಹೊಂದಿದರು.
.
ಮಡಿಕೇರಿಯ ಮದೆನಾಡಿನ ಮುದ್ದೇನ ದವರಾದ ಇವರ ಪ್ರಾಥಮಿಕ ಶಿಕ್ಷಣವನ್ನು ಗೋಳಿಕಟ್ಟೆಯಲ್ಲಿ, ಸೈಂಟ್ ಮೈಕಲ್ ನಲ್ಲಿ ಪ್ರೌಢ ಶಿಕ್ಷಣವನ್ನು, ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಪದವಿ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದು, ಕಿ.ಮ.ಆ.ಸ ತರಬೇತಿಯನ್ನು ಮೈಸೂರು ಕೆ.ಆರ್ ಆಸ್ಪತ್ರೆಯಲ್ಲಿ ಪಡೆದು 1988 ಮೈಸೂರಿನ ಮಲೆ ಮಹದೇಶ್ವರ ಬೆಟ್ಟ ಇಲ್ಲಿ ಸರ್ಕಾರಿ ಸೇವೆಗೆ ಕರ್ತವ್ಯಕ್ಜೆ ಹಾಜರಾದರು.
1993 ರಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಗೊಂಡು 28 ವರ್ಷ ಸೇವೆ ಸಲ್ಲಿಸಿದರು. 2010 ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಪಡೆದು ಪದೋನ್ಬತಿ ಹೊಂದಿ 2021 ರಲ್ಲಿ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಗೊಂಡರು. ಸುಧೀರ್ಘ 36 ವರ್ಷಗಳ ಕಾಲ ವೃತ್ತಿ ಸಲ್ಲಿಸಿದ್ದಾರೆ. 2022- 23 ರಲ್ಲಿ ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಉತ್ತಮ ಕೆಲಸ ಮಾಡಿದಕ್ಕಾಗಿ ಉತ್ತಮ ಸಾಧನೆ ಪ್ರಶಸ್ತಿ, 2024 ನೇ ಸಾಲಿನಲ್ಲಿ ವಿಶ್ವ ಜನ ಸಂಖ್ಯಾ ದಿನಾಚರಣೆಯಂದು ಕುಟುಂಬ ಕಲ್ಯಾಣ ಯೋಜನೆಯಲ್ಲಿ ಉತ್ತಮ ನಿರ್ವಹಣೆಯಲ್ಲಿ ಉತ್ತಮ ಸಾಧನ ಪ್ರಶಸ್ತಿ ಪಡೆದಿರುತ್ತಾರೆ. ಅಲ್ಲದೆ ಕೋವಿಡ್ 19 ಸಂದರ್ಭ ವಿಶೇಷ ಸಂಕಷ್ಟ ಸಾಂಕ್ರಾಮಿಕ ಸಮಯಲ್ಲಿ ಉತ್ತಮವಾಗಿ ಲಸಿಕಾ ಕಾರ್ಯಕ್ರಮ ಮತ್ತು ಎಲ್ಲಾ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ.
ಇವರ ಪತಿ ಆಲೆಟ್ಟಿ ಕುಡೆಕಲ್ಲಿನವರಾಗಿದ್ದು ಹೋಮಿಯೋಪತಿ ವೈದ್ಯರಾಗಿರುವ ಚಂದ್ರಶೇಖರ ಅವರು. ಇವರ ಪುತ್ರ ಧ್ಯಾನ್ ಸುಬ್ರಹ್ಮಣ್ಯ.