ಬಿಸಿಯೂಟ ನೌಕರರಿಗೆ ರೂ 40 ಸಾವಿರ ಇಡುಗಂಟು : ಸಿಐಟಿಯು ಸ್ವಾಗತ

0

ಅಕ್ಷರ ದಾಸೋಹ ನೌಕರ ಸಂಘ (CITU) ನೇತೃತ್ವದಲ್ಲಿ ತಮ್ಮ ಬೇಡಿಕೆಗಾಗಿ ನಿರಂತವಾಗಿ ನಡೆದ ಹೋರಾಟದ ಫಲವಾಗಿ ಬಿಸಿಊಟ ತಯಾರಿಸುವ ನೌಕರರಿಗೆ 60 ವರ್ಷಗಳ ಬಳಿಕ ರೂ 40 ಸಾವಿರ ಇಡುಗಂಟು ನೀಡಲು ಶಿಕ್ಷಣ ಇಲಾಖೆ ಸಮ್ಮತಿಸಿದೆ ಮತ್ತು 15 ವರ್ಷ ಕೆಲಸ ಮಾಡಿ 60 ವರ್ಷಕ್ಕೆ ನಿವೃತಿ ಹೊಂದುವವರಿಗೆ ರೂ 40 ಸಾವಿರ ನಗದು ದೊರೆಕಲಿದೆ ಐದು ವರ್ಷಗಳ ಒಳಗೆ ಕೆಲಸ ಮಾಡಿದ್ದರೆ ಅಂಥವರಿಗೂ ರೂ 30 ಸಾವಿರ ಸಿಗಲಿದೆ.

ಇದು ಮಾರ್ಚ್ 2022 ರಿಂದ ಅಥವಾ ನಂತರ ನಿವೃತ್ತಿ ರದವರಿಗೆ ಮಾತ್ರ ಅನ್ವಯಿಸುತ್ತದೆ. ಸರ್ಕಾರದ ಈ ಕ್ರಮವನ್ನು ಸ್ವಾಗತಿಸುವುದಾಗಿ ಸುಳ್ಯದ ಕಾರ್ಮಿಕ ನಾಯಕ ಹಾಗೂ ಅಕ್ಷರ ದಾಸೋಹ ನೌಕರ ಸಂಘ ದ ಗೌರವಧ್ಯಕ್ಷ ರು ಸಿಐಟಿ ಯುವಿನ ಮುಖಂಡರಾದ ಕೆ ಪಿ ರಾಬರ್ಟ್ ಡಿಸೋಜ ತಿಳಿಸಿದ್ದಾರೆ.