ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸುಳ್ಯದ ಭಾರತ್ ಶಾಮಿಯಾನ

0

ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿದ ನಗುಮೊಗದ ಸೇವೆಯ 25 ಸಂವತ್ಸರಗಳು..!

ಸುಳ್ಯ: ಒಂದು ಕಾಲದಲ್ಲಿ ಮಡಲಿನ ತಟ್ಟಿಯ ಚಪ್ಪರ, ಸೋಗೆಯ ಮಾಡು ಮಾಡಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ವರ್ಣಮಯ ಶಾಮಿಯಾನಗಳನ್ನು ಹಾಕಿ ಕಾರ್ಯಕ್ರಮಗಳನ್ನು, ಸಮಾರಂಭಗಳನ್ನು ಆಕರ್ಷಕವಾಗಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿದ ಸುಳ್ಯದ ಹೆಸರಾಂತ ಸಂಸ್ಥೆ ಭಾರತ್ ಶಾಮಿಯಾನ ಸುಳ್ಯದಲ್ಲಿ ತನ್ನ ಯಾತ್ರೆ ಆರಂಭಿಸಿ 25 ವರ್ಷಗಳನ್ನು ಪೂರೈಸಿದೆ. ಇಂದು ಯಾವುದೇ ಕಾರ್ಯಕ್ರಮಗಳನ್ನು, ಸಮಾರಂಭಗಳನ್ನು ನಡೆಸಲು ಸಕಲ ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ವ್ಯವಸ್ಥೆಗಳನ್ನು ಹೊಂದಿರುವ ಭಾರತ್ ಶಾಮಿಯಾನ ಇದೀಗ ಬೆಳ್ಳಿ ಹಬ್ಬದ‌ ಸಂಭ್ರಮದಲ್ಲಿದೆ. ನಗು ಮೊಗದ ಅರ್ಪಣಾ ಭಾವದ ಸೇವೆಯ ಸಾರ್ಥಕತೆಯ 25 ಸಂವತ್ಸರಗಳು. ಸುಳ್ಯ ಅಡ್ಕಾರ್ ನಿವಾಸಿ ಜಿ.ಪಿ.ಸಂಶುದ್ದೀನ್ ಹಲವು ವ್ಯಾಪಾರ, ವ್ಯವಹಾರ, ಗಲ್ಫ್ ರಾಷ್ಟ್ರದ ಪ್ರವಾಸಿ ಬದುಕಿನ ಬಳಿಕ ಜಾಲ್ಸೂರಿನಲ್ಲಿ ಭಾರತ್ ಶಾಮಿಯಾನವನ್ನು ಆರಂಭಿಸಿದರು. 5 ವರ್ಷಗಳ ಜಾಲ್ಸೂರಿನಲ್ಲಿ ಸಂಸ್ಥೆ ನಡೆಸಿ ಬಳಿಕ 2000ನೇ ವರ್ಷದ ಜನವರಿ 3 ರಂದು ಸುಳ್ಯದಲ್ಲಿ ಶಾಮಿಯಾನ ವ್ಯವಹಾರ ಆರಂಭಿಸಿದರು‌. ಬಳಿಕ ಹಿಂತಿರುಗಿ ನೋಡಿಲ್ಲ. ಆ ಸಂದರ್ಭದಲ್ಲಿ ಬೆರಳೆಣಿಕೆಯ ಶಾಮಿಯಾನ ಲೈಟಿಂಗ್ಸ್ ಅಳವಡಿಸುವ ಸಂಸ್ಥೆಗಳು ಮಾತ್ರ ಸುಳ್ಯದಲ್ಲಿ ಇತ್ತು. ಸಂಶುದ್ದೀನ್ ನೇತೃತ್ವದಲ್ಲಿ ಸುಮಾರು 12-13 ಮಂದಿಯ ತಂಡ ಸುಳ್ಯ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ, ಕಾಡು ಮೇಡು, ಗುಡ್ಡೆ ಹತ್ತಿ ತೆರಳಿ ಶಾಮಿಯಾನ,ಪೆಂಡಲ್ ಅಳವಡಿಸಿದರು. ಜನರಿಗೆ ಆಧುನಿಕ ವ್ಯವಸ್ಥೆಯ ಒಂದೊಂದೇ ಮಜಲುಗಳನ್ನು ಪರಿಚಯಿಸಿದರು. ಅದು ಅಕ್ಷರಷಃ ಕ್ರಾಂತಿಯೇ ಆಯಿತು. ಇಂದು ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಸರ್ವ ಸಮಾರಂಭಗಳಿಗೆ ಬೇಕಾದ ಸರ್ವ ಸಾಧನಗಳು ಒಂದೇ ಸೂರಿನಡಿ ಲಭಿಸುವ ಪ್ರತಿಷ್ಠಿತ ಸಂಸ್ಥೆಯಾಗಿ ಭಾರತ್ ಶಾಮಿಯಾನ ಬೆಳೆದು ನಿಂತಿದೆ.

ಆಧುನಿಕ ಸ್ಪರ್ಶ: ಲಕ್ಷಕ್ಕೂ ಮಿಕ್ಕಿದ ಜನರ ಕಾರ್ಯಕ್ರಮಕ್ಕೆ ವ್ಯವಸ್ಥೆ
ಈಗ ಯಾವುದೇ ಸಮಾರಂಭವನ್ನು ಸುಸಜ್ಜಿತವಾಗಿ ಅತ್ಯಾಧುನಿಕವಾಗಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಲಭ್ಯ, ಸಣ್ಣ ಸಮಾರಂಭಗಳಿಂದ ಹಿಡಿದು ಒಂದು ಲಕ್ಷಕ್ಕೂ ಮಿಕ್ಕಿದ ಜನರನ್ನು ಒಳಗೊಳ್ಳಬಹುದಾದ ಕಾರ್ಯಕ್ರಮದ ವ್ಯವಸ್ಥೆ ಇವರಲ್ಲಿದೆ.ಹಲವು ವಿಧದ ಅತ್ಯಾಧುನಿಕ ಶಾಮಿಯಾನ, ಪೆಂಡಾಲ್‌ಗಳನ್ನು ಸುಳ್ಯಕ್ಕೆ ಪರಿಚಯಿಸಿದ ಮತ್ತು ಜನಪ್ರಿಯಗೊಳಿಸಿದ ಕೀರ್ತಿ ಭಾರತ್ ಶಾಮಿಯಾನಕ್ಕಿದೆ.
ಸಾಮಾನ್ಯ ಶಾಮಿಯಾನ, ಪೆಂಡಾಲದ ಜೊತೆಗೆ ಅತ್ಯಾಧುನಿಕ ಶೈಲಿಯ ಹ್ಯಾಂಗಿಂಗ್ ಪೆಂಡಾಲ್(ಉಯ್ಯಾಲೆ ಮಾದರಿ), ಅಂಬ್ರೆಲ್ಲಾ ಪೆಂಡಾಲ್(ಕೊಡೆ ಮಾದರಿ)ಗಳನ್ನು ಈಗ ಅಳವಡಿಸಲಾಗುತ್ತದೆ. ಆಕರ್ಷಕ ಪೆಂಡಾಲ್ ಅಳವಡಿಸಿ ಅದರ ಅಡಿಯಲ್ಲಿ ವರ್ಣಮಯ ಸೀಲಿಂಗ್ ಮಾಡಿಕೊಡಲಾಗುತ್ತದೆ. ಎಯರ್ ಕಂಡೀಷನರ್ ಪೆಂಡಾಲ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ ಪೆಂಡಾಲ್‌ಗಳು, ಸ್ಟೇಜ್‌ಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಅತ್ಯಾಧುನಿಕ ಶೈಲಿಯ ಗ್ಲಾಸ್ ಚೆಯರ್, ವಿಐಪಿ ಚೆಯರ್ ಸೇರಿದಂತೆ ಎಲ್ಲಾ ತರಹದ ಚೆಯರ್‌ಗಳು, ಡೈನಿಂಗ್, ಪಾರ್ಟಿ ಟೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಅಕರ್ಷಕ ಪ್ರವೇಶ ದ್ವಾರಗಳು, ಕಮಾನುಗಳುಗಳನ್ನು ಅಳವಡಿಸುವುದರ ಜೊತೆಗೆ ಆಕರ್ಷಕ ಹಾಗೂ ವರ್ಣ ವಿನ್ಯಾಸದ ಎಲ್ಲಾ ತರಹದ ಝಗಮಗಿಸುವ ಲೈಟಿಂಗ್ಸ್ ವ್ಯವಸ್ಥೆಯನ್ನೂ ಇವರು ಮಾಡಿ ಕೊಡುತ್ತಾರೆ. ಮಧುವೆ ಮತ್ತಿತರ ಸಮಾರಂಭಗಳಲ್ಲಿ ಲೈವ್ ಆಗಿ ಜ್ಯೂಸ್, ಸ್ವೀಟ್ ಕೌಂಟರ್‌ಗಳನ್ನು ವ್ಯವಸ್ಥೆ ಮಾಡಿ ಕೊಡುತ್ತಾರೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯ ಎಲ್ಲಾ ರೀತಿಯ ಪಾತ್ರೆಗಳನ್ನು ಒದಗಿಸುತ್ತಾರೆ. ಕೇವಲ ಒಂದು ಪೋನ್ ಕರೆಗೆ ಯಾವುದೇ ಸಮಾರಂಭಗಳಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಒದಗಿಸಲು ಭಾರತ್ ಶಾಮಿಯಾನದ ತಂಡ ಸಿದ್ಧವಾಗಿದೆ.

ಸಾವಿರಾರು ಕಾರ್ಯಕ್ರಮಗಳು
ಮಧುವೆ, ಸಾರ್ವಜನಿಕ ಸಮಾರಂಭ, ಉತ್ಸವ, ಹಬ್ಬ, ಕ್ರೀಡಾಕೂಟ ಸೇರಿದಂತೆ ಸಾವಿರಾರು ಕಾರ್ಯಕ್ರಮಗಳಿಗೆ ಸಕಲ ವ್ಯವಸ್ಥೆಗಳನ್ನು ಭಾರತ್ ಶಾಮಿಯಾನ ಕಳೆದ 25 ವರ್ಷಗಳಲ್ಲಿ ಯಶಸ್ವಿಯಾಗಿ ಮಾಡಿದೆ. 5 ಸಾವಿರಕ್ಕೂ ಮಿಕ್ಕಿ ದೊಡ್ಡ ಕಾರ್ಯಕ್ರಮಗಳು, ನೂರಾರು ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಭಾರತ್ ಶಾಮಿಯಾನ ಸಕಲ ವ್ಯವಸ್ಥೆಯನ್ನು ಒದಗಿಸಿದೆ. ಹಲವು ವರ್ಷಗಳ ಕಾಲ ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ, ತಲಕಾವೇರಿಯಲ್ಲಿ ಸೇರಿದಂತೆ ಶಾಮಿಯಾನ, ಪೆಂಡಾಲ್ ಒದಗಿಸಿದ್ದಾರೆ.ವಿವಿಧ ಕಡೆ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸೇರಿದಂತೆ ಹಲವಾರು ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್‌ಗಳ ವಿವಿಧ ಕಾರ್ಯಕ್ರಮದಲ್ಲಿ ಶಾಮಿಯಾನ, ಪೆಂಡಾಲ್ ಸೇರಿ ಎಲ್ಲಾ ವ್ಯವಸ್ಥೆ ಒದಗಿಸುತ್ತಾ ಬಂದಿದ್ದಾರೆ‌. ಸಾವಿರಾರು ಮದುವೆ ಮತ್ತಿತರ ಸಮಾರಂಭಗಳಿಗೆ ಸೇವೆ ನೀಡಿದ್ದಾರೆ. ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಸೇರಿದಂತೆ ನೂರಾರು ಕ್ರೀಡಾ ಕೂಟಗಳ ವ್ಯವಸ್ಥೆಯನ್ನೂ ಭಾರತ್ ಶಾಮಿಯಾನ ಮಾಡಿದೆ.‌ ಕ್ರೀಡಾಕೂಟಗಳಿಗೆ ಪೆಂಡಾಲ್ ಮಾತ್ರವಲ್ಲದೆ ಲೈಟಿಂಗ್ಸ್, ಗ್ಯಾಲರಿ ವ್ಯವಸ್ಥೆಯನ್ನೂ ಇವರು ಮಾಡುತ್ತಾರೆ.
ಹೊರೆಯಾಗದಂತೆ ಮಿತ ದರ:
ಯಾವುದೇ ಕಾರ್ಯಕ್ರಮ ನಡೆದರೂ ಸಂಘಟಕರಿಗೆ ಹೊರೆಯಾಗದಂತೆ ಮಿತ ದರದಲ್ಲಿ ಶಾಮಿಯಾನ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲು ಸಂಶುದ್ದೀನ್ ಸದಾ ಗಮನ ಹರಿಸುತ್ತಾರೆ. ಬಡವರಿಗೆ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅತೀ ಕಡಿಮೆ ದರದಲ್ಲಿ ಕೆಲವೊಮ್ಮೆ ಉಚಿತವಾಗಿ ಸೇವೆ ಒದಗಿಸಿದ್ದಾರೆ. ಬಡವರ, ವಿವಿಧ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಶಾಮಿಯಾನ ಸೆಟ್ ಒದಗಿಸಿ ತಮ್ಮ ಸಾಮಾಜಿಕ ಬದ್ಧತೆಯನ್ನೂ ಮೆರೆದಿದ್ದಾರೆ ಇವರು.

ಗ್ರಾಹಕರ ಪ್ರೀತಿ,ಪ್ರೋತ್ಸಾಹ- ಸಿಬ್ಬಂದಿಗಳ ಅರ್ಪಣಾ ಭಾವದಿಂದ ಯಶಸ್ಸು- ಸಂಶುದ್ದೀನ್ ಮನದ ಮಾತು

ಕಳೆದ 25 ವರ್ಷಗಳಿಂದ ಸುಳ್ಯದ ಹಲವಾರು ಕಾರ್ಯಕ್ರಮಗಳ ಭಾಗವಾಗಿ ಸೇವೆ ನೀಡಲು ಸಾಧ್ಯವಾಗಿರುವುದು ತೃಪ್ತಿ ತಂದಿದೆ. ಗ್ರಾಹಕರ, ಸುಳ್ಯದ ಜನತೆಯ ಪ್ರೀತಿ, ವಿಶ್ವಾಸ, ಪ್ರೋತ್ಸಾಹದಿಂದ ಮತ್ತು ತನ್ನ ಸಂಸ್ಥೆಯ ಸಿಬ್ಬಂದಿಗಳ ಅರ್ಪಣಾ ಮನೋಭಾವದ ಸೇವೆಯಿಂದ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗಿದೆ ಎನ್ನುತ್ತಾರೆ ಭಾರತ್ ಶಾಮಿಯಾನದ ಮಾಲಕರಾದ ಜಿ.ಪಿ.ಸಂಶುದ್ದೀನ್. ಕೇವಲ ಒಂದು ಪೋನ್ ಕರೆಗೆ ಸರ್ವ ಸಮಾರಂಭಗಳಿಗೆ ಬೇಕಾದ ಸರ್ವ ಸಾಧನಗಳ ಸಕಲ ವ್ಯವಸ್ಥೆಗಳನ್ನು ಮಾಡಲು ಮುಂದೆಯೂ ನಮ್ಮ ತಂಡ‌ ಸಿದ್ಧವಿದೆ ಎನ್ನುತ್ತಾರೆ ಸಂಶುದ್ದೀನ್.

ಸುಳ್ಯ ತಾಲೂಕು ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲಕರ ಸಂಘದ ಸಂಘಟನಾ ಕಾರ್ಯದರ್ಶಿಯಾದ ಸಂಶುದ್ದೀನ್ ಶಾಮಿಯಾನ ಮತ್ತು ಲೈಟಿಂಗ್ಸ್ ಸಂಘ ನಡೆಸಿದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ರೂವಾರಿಗಳಲ್ಲಿ ಓರ್ವರು.

(ಯಾವುದೇ ಸಭೆ, ಸಮಾರಂಭ ಮತ್ತಿತರ ಕಾರ್ಯಕ್ರಮಗಳ ವ್ಯವಸ್ಥೆಗೆ ಸಂಪರ್ಕಿಸಿ: ಭಾರತ್ ಶಾಮಿಯಾನ-9448012134)