ಸುಳ್ಯ ಗಾಂಧಿನಗರದಲ್ಲಿ ಜನತಾ ಸ್ಟೋರ್ ಮುಂಭಾಗದಲ್ಲಿರುವ ಕೆ.ಎಂ.ಜಾಫರ್ ರವರ ಕಟ್ಟಡದಲ್ಲಿಮುಳ್ಳೇರಿಯಾದ ರಂಜಿತ್ ರಾವ್ ರವರ ಮಾಲಕತ್ವದ ಇನ್ ಸ್ಪೈರ್ ಮೆನ್ಸ್ ವೇರ್ ಜ.5 ರಂದು ಶುಭಾರಂಭಗೊಂಡಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಯವರು ರಿಬ್ಬನ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ರವರು ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಗಳಾಗಿ ಜನತಾ ಗ್ರೂಫ್ ಮಾಲಕ ರೊ| ಅಬ್ದುಲ್ ಹಮೀದ್, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಿ.ಇ.ಒ ಕೆ.ಟಿ.ವಿಶ್ವನಾಥ, ದೀಕ್ಷಾ ಟ್ರೇಡರ್ಸ್ ಮಾಲಕ ಉದ್ಯಮಿ ಮಾಧವ ರಾವ್, ಪಲ್ಲವಿ ಸೂಪರ್ ಮಾರ್ಕೆಟ್ ಮಾಲಕ ಲತೀಶ್, ಮಾಲಕರ ತಂದೆ ನಾರಾಯಣ ರಾವ್ ಮುಳ್ಳೇರಿಯಾ ಮತ್ತು ತಾಯಿ ಶ್ರೀಮತಿ ಸುಜಾತ,
ಯೂ ಟ್ಯೂಬರ್ ಚಿಂಟು ಸುಳ್ಯ,ಅರುಣ್ ರಾವ್ ಬೆಟ್ಟಂಪಾಡಿ, ಶ್ರೀಲತಾ ಭರತ್ ಕುಮಾರ್, ವನಿತಾ ನಾರಾಯಣ ರಾವ್ ಉಪಸ್ಥಿತರಿದ್ದರು.
ಮಾಲಕರ ಬಂಧು ಮಿತ್ರರು ಸಹಕರಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪುರುಷರ ಬ್ರಾಂಡೆಡ್ ಸಿದ್ಧ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.