ಸುಳ್ಯದ ಕೋರ್ಟ್ ಹಿಂಬದಿಯಿಂದ ಕುರುಂಜಿಗುಡ್ಡೆ ಹೋಗುವ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ, ಬಿ.ಸಿ.ಎಂ. ಹಾಗೂ ಸಮಾಜ ಕಲ್ಯಾಣ ಇಲಾಖಾ ಹಾಸ್ಟೆಲ್ ಇದರ ಸಹಯೋಗದಲ್ಲಿ ನಡೆಯಿತು.
ಪಯಸ್ವಿನಿ ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಯವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಉದ್ಯಮಿ ಸತ್ಯಾನಂದ ಕುರುಂಜಿ ಶುಭ ಹಾರೈಸಿದರು. ನ.ಪಂ. ಸದಸ್ಯೆ ಶ್ರೀಮತಿ ಪೂಜಿತಾ ಕೆ.ಯು., ನಗರ ಗೌಡ ಸಮಿತಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಪಯಸ್ವಿನಿ ಯುವಕ ಮಂಡಲದ ಮಾಜಿ ಅಧ್ಯಕ್ಷರು, ಊರವರು ಹಾಗೂ ಬಿ.ಸಿ.ಎಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ಸೇರಿ 200 ಕ್ಕೂ ಅಧಿಕ ಮಂದಿ ಅಭಿಯಾನದಲ್ಲಿ ಭಾಗವಹಿಸಿದರು.