ಜಯನಗರ ಹಾಗೂ ದೇರಾಜೆಯಿಂದ ಪಾದಯಾತ್ರೆ ಮೂಲಕ ತೆರಳಿದ ಭಕ್ತಾದಿಗಳು
ಸಾವಿರಾರು ಮಂದಿ ಭಕ್ತಾದಿಗಳ ಉಪಸ್ಥಿತಿ
ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಧನುರ್ಮಾಸದ ಪ್ರಯುಕ್ತ ಪ್ರತಿ ದಿನ ಪ್ರಾತ:ಕಾಲ ಧನುಪೂಜೆಯು ಸಂಭ್ರಮದಿಂದ ಜರುಗುತ್ತಿದೆ.
ಡಿ.29ರಂದು ಬೆಳಿಗ್ಗೆ ಸುಳ್ಯದ ಜಯನಗರ ಹಾಗೂ ಅರಂತೋಡಿನ ದೇರಾಜೆಯಿಂದ ಹಲವಾರು ಮಂದಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಗೆ ತೆರಳಿ ಧನುಪೂಜೆಯಲ್ಲಿ ಪಾಲ್ಗೊಂಡಿದ್ದರು.
ಉಬರಡ್ಕ ಮಿತ್ತೂರು ಗ್ರಾಮದಿಂದ ಬೆಳಿಗ್ಗೆ ಎರಡು ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಸುಳ್ಯದ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಧನುಪೂಜೆಯಲ್ಲಿ 170 ಮಂದಿ ಪೂಜಾ ಸೇವೆ ನಡೆಸಿದ್ದು, ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಜ.14ರಂದು ಮಕರ ಸಂಕ್ರಮಣದ ದಿನ ಧನುಪೂಜೆಯು ಸಮಾಪ್ತಿಗೊಳ್ಳಲಿದೆ.