ಕ್ಯಾಪ್ಟನ್ ವಸಂತ ಪೇರಡ್ಕ ಸೇವೆಯಿಂದ ನಿವೃತ್ತಿ

0

29 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ವಸಂತ ಪೇರಡ್ಕರವರು ಡಿ.31 ರಂದು ಸೇವಾ ನಿವೃತ್ತಿಯಾಗಲಿದ್ದಾರೆ.

1996 ಏಪ್ರಿಲ್ 25 ರಂದು ಸೇನೆಗೆ ಸೇರ್ಪಡೆಗೊಂಡ ಇವರು ರಾಜಸ್ತಾನ, ಅಸ್ಸಾಂ, ಜಮ್ಮು ಕಾಶ್ಮೀರ, ಲಡಾಕ್, ಅರುಣಾಚಲ ಪ್ರದೇಶ, ಕೊಯಮತ್ತೂರು, ಆಂಧ್ರ ಪ್ರದೇಶ ದಲ್ಲಿ ಸೇವೆ ಸಲ್ಲಿಸಿ ಡಿ.31 ರಂದು ನಿವೃತ್ತಿ ಹೊಂದಿದರು.


ಇವರು ಪೇರಡ್ಕದ ಮಡಪ್ಪಾಡಿ ರಾಮಚಂದ್ರ ಮತ್ತು ದೇವಕಿ ದಂಪತಿಯ ಪುತ್ರ. ವಸಂತ ರವರ ಪತ್ನಿ ಮಮತಾ, ಪುತ್ರಿಯರಾದ ತ್ರಿಶಾ ಪಿ.ವಿ., ದಿಶಾ ಪಿ.ವಿ. ರೊಂದಿಗೆ ನೆಲೆಸಿದ್ದಾರೆ.