ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸಿ.ಎಲ್.ಎಫ್ ಮೇದಿನಡ್ಕ ಕಾರ್ಖಾನೆಯ ಉದ್ಯೋಗಿ ಜಿ.ಎಂ.ಬಾಲಸುಬ್ರಹ್ಮಣ್ಯಂ ರವರು ಸುದೀರ್ಘ 38 ವರ್ಷಗಳ ಕಾಲ ವೃತ್ತಿ ಸೇವೆಯಿಂದ ಡಿ.31 ರಂದು ನಿವೃತ್ತಿಯಾಗಿರುತ್ತಾರೆ.
ಬಾಲಸುಬ್ರಹ್ಮಣ್ಯಂ ರವರು ಮೂಲತಃ ಶ್ರೀಲಂಕಾದವರಾಗಿದ್ದು ಮಾರಿಮುತ್ತು ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರರಾಗಿ ಶ್ರೀಲಂಕಾದಲ್ಲಿ ಜನಿಸಿದರು. ತದ ನಂತರ ಸುಳ್ಯಕ್ಕೆ ಬಂದು ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಸ.ಪ್ರಾ.ಶಾಲೆ ಸೋಣಂಗೇರಿ ಹಾಗೂ ಪ್ರೌಢ ಶಿಕ್ಷಣವನ್ನು ಸ.ಪ.ಪೂ.ಕಾಲೇಜು ಸುಳ್ಯದಲ್ಲಿ ಪೂರೈಸಿರುತ್ತಾರೆ. ಬಳಿಕ ಸುಳ್ಯದಲ್ಲಿ ಅಟೋ ಚಾಲಕರಾಗಿ ವೃತ್ತಿ ಜೀವನ ಆರಂಭಿಸಿರುತ್ತಾರೆ. ನಂತರ 1987 ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುಳ್ಯ ರಬ್ಬರ್ ವಿಭಾಗದ ಮೇದಿನಡ್ಕ ಘಟಕದಲ್ಲಿ ಹೆಲ್ಪರ್ ಕಂ ಕ್ಲೀನರ್ ಹುದ್ದೆಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡರು.
2004 ರಿಂದ 2017 ರ ತನಕ ಐವರ್ನಾಡು ರಬ್ಬರ್ ವಿಭಾಗದಲ್ಲಿ ಹಾಗೂ 2017 ರಿಂದ 2022 ರ ವರೆಗೆ ಸುಳ್ಯ ರಬ್ಬರ್ ವಿಭಾಗದ ಕಚೇರಿ ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ, 2022 ರಿಂದ 2023 ರ ತನಕ ಚಿಕ್ಕಮಗಳೂರು ವಿಭಾಗದಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಬಳಿಕ ಸಿ.ಎಲ್.ಎಫ್.ಮೇದಿನಡ್ಕ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸಿ 2024 ರ ಡಿ.31 ರ ತನಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ.
ಇವರ ಪತ್ನಿ ಸುಳ್ಯ ನಗರ ಪಂಚಾಯತ್ ಸಮುದಾಯ ಸಂಘಟನಾಧಿಕಾರಿ ಶ್ರೀಮತಿ ಜಯಲಕ್ಷ್ಮಿ,ಇಬ್ಬರು ಪುತ್ರರಾದ ಸಂದೀಪ್ ಮತ್ತು ಸಂಪತ್ ರವರೊಂದಿಗೆ ಪ್ರಸ್ತುತ ಸುಳ್ಯದಲ್ಲಿ ವಾಸಿಸುತ್ತಿದ್ದಾರೆ.