ಸುಳ್ಯ ಲಯನ್ಸ್ ಕ್ಲಬ್ ನಿಂದ ಬೆಳ್ಳಾರೆ ಕೆ.ಪಿ.ಎಸ್. ಶಾಲೆಗೆ ಬೆಂಚು‌-ಡೆಸ್ಕ್ ಕೊಡುಗೆ

0

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಬೆಳ್ಳಾರೆ ಕೆ.ಪಿ.ಎಸ್. ಶಾಲೆಗೆ ಅಗತ್ಯವಿದ್ದ 10 ಡೆಸ್ಕ್‌ ಮತ್ತು 10 ಬೆಂಚ್ ನ್ನು ಕೊಡುಗೆಯಾಗಿ ನೀಡಲಾಗಿದೆ.
ಇದರ ಸಂಪೂರ್ಣ ‌ವೆಚ್ಚವನ್ನು ಲಯನ್ ಹರೀಶ್ ರೈ ಉಬರಡ್ಕ ಮತ್ತು ಲ.ರಾಜೀವಿ‌ ಹರೀಶ್ ರೈ ಭರಿಸಿದ್ದು ಲಯನ್ಸ್ ಕ್ಲಬ್ ನ ಮೂಲಕ ಕೊಡುಗೆಯಾಗಿ ನೀಡಿದ್ದಾರೆ.

ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಾಥ್ ಬಾಳಿಲ ವಹಿಸಿದ್ದರು. ಲಯನ್ಸ್‌ ಕ್ಲಬ್ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಜಿಲ್ಲಾ‌ ಜಿ.ಎಂ.ಟಿ. ಕಾರ್ಡಿನೇಟರ್ ಜಯರಾಮ ದೇರಪ್ಪಜ್ಜನಮನೆ, ಕೊಡುಗೆ ನೀಡಿದ ಹರೀಶ್ ರೈ ಉಬರಡ್ಕ, ರಾಜೀವಿ ರೈ, ಮತ್ತು ಶಾಲಾ ಮುಖ್ಯೋಪಾಧ್ಯಾಯ ಮಾಯಿಲಪ್ಪ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಲ.ರಾಮಚಂದ್ರ ಪೆಲತ್ತಡ್ಕ, ಲ.ವಿನೋದ್‌ ಲಸ್ರಾದೋ, ಲ.ರಾಮಕೃಷ್ಣ ಕೆ, ಲ.ಚಂದ್ರಶೇಖರ ನಂಜೆ, ಲ.ವೆಂಕಟ್ರಮಣ ಮೆದು, ಲ.ರಮೇಶ್ ಶೆಟ್ಟಿ, ಶಾಲಾ‌ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ‌ ಶ್ರೀಮತಿ ‌ಸವಿತಾ ಸ್ವಾಗತಿಸಿದರು. ದಿನೇಶ್ ಮಾಚಾರ್ ಕಾರ್ಯಕ್ರಮ ‌ನಿರೂಪಿಸಿದರು.