ಎ.ಕೆ. ಕೃಷ್ಣಪ್ಪ ಗೌಡ ಅತ್ಯಾಡಿ ನಿಧನ

0


ಜಾಲ್ಸೂರು ಗ್ರಾಮದ ನಂಗಾರಿನಲ್ಲಿ ನೆಲೆಸಿದ್ದ ಎ.ಕೆ. ಕೃಷ್ಣಪ್ಪ ಗೌಡ ಅತ್ಯಾಡಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.24ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ಪುತ್ತೂರು ಹಾಗೂ ಸುಳ್ಯ ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಹೊಂದಿದ್ದರು.


ಮೃತರು ಪತ್ನಿ ಜಯಶೀಲ, ಪುತ್ರರಾದ ಶ್ಯಾಮ್ ಪ್ರಸಾದ್, ಶರತ್ ಕುಮಾರ್, ಪುತ್ರಿಯರಾದ ಶ್ರೀಮತಿ ಸವಿತ, ಶ್ರೀಮತಿ ಶಾಂತಿ ಸೇರಿದಂತೆ ಮೊಮ್ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.