ಸುಳ್ಯ ಕ.ಸಾ‌.ಪ.ವತಿಯಿಂದ ಮಳೆಗಾಲದ ವಿನೂತನ ಕಾರ್ಯಕ್ರಮ

0

ಸಂಗೀತ ವರ್ಷಧಾರೆ ಮಳೆ ಹಾಡುಗಳ ಕಲರವ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾವನಾ ಸುಗಮ ಸಂಗೀತ ಬಳಗ ಮತ್ತು ವಿವಿಧ ಪ್ರೌಢಶಾಲೆಗಳ ಆಶ್ರಯದಲ್ಲಿ ಸಂಗೀತ ವರ್ಷಧಾರೆ ಮಳೆ ಹಾಡುಗಳ ಕಲರವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಆ.9ರಂದು ಸುವಿಚಾರ ಸಾಹಿತ್ಯ ಸಂಘ, ವಿದ್ಯಾ ಬೋಧಿನೀ ಪ್ರೌಢಶಾಲೆ ಬಾಳಿಲ ಆಶ್ರಯದಲ್ಲಿ ವಿದ್ಯಾಬೋಧಿನಿ ವಿದ್ಯಾ ಸಂಸ್ಥೆ ಬಾಳಿಲದಲ್ಲಿ, ಆ.10ರಂದು ಸರಕಾರಿ ಪ್ರೌಢ ಶಾಲೆ ಮರ್ಕಂಜದಲ್ಲಿ,
ಆ‌. 12 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ . ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಇವರು ವಹಿಸಲಿದ್ದು , ಶಾಲಾ ಶಾಲಾಭಿವೃದ್ಧಿ ಸಮಿತಿಯ ಮುಖ್ಯಸ್ಥರು, ಮುಖ್ಯ ಶಿಕ್ಷಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಳೆ ಹಾಡುಗಳನ್ನು ಭಾವನಾ ಸುಗಮ ಸಂಗೀತ ಬಳಗದ ಕೆ ಆರ್ ಗೋಪಾಲಕೃಷ್ಣ ಹಾಗೂ ತಂಡದವರು ಹಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾಹಿತ್ಯಾಭಿಮಾನಿಗಳು ಭಾಗವಸಬೇಕೆಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.