ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷತೆಗೆ ವಿಜಯ್ ಅಂಙಣ, ಉಪಾಧ್ಯಕ್ಷತೆಗೆ ಜಯಂತ ಬಾಳುಗೋಡು ನಾಮಪತ್ರ ಸಲ್ಲಿಕೆ : ಅವಿರೋಧ ಆಯ್ಕೆ ಖಚಿತ

0

ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಹೊಸ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನ ಸಾಮಾನ್ಯ ವರ್ಗಕ್ಕೆಇದ್ದು ಅಧ್ಯಕ್ಷತೆಗೆ ಹಾಲಿ ಉಪಾಧ್ಯಕ್ಷ ವಿಜಯ್ ಅಂಙಣ, ಉಪಾಧ್ಯಕ್ಷತೆಗೆ ಹಾಲಿ ಅಧ್ಯಕ್ಷ ಜಯಂತ ಬಾಳುಗೋಡು ನಾಮಪತ್ರ ಸಲ್ಲಿಸಿದ್ದು ಇವರ ಅಯ್ಕೆ ಖಚಿತವಾಗಿದೆ. ವಿಜಯ್ ಅಂಙಣ ಅವರನ್ನು ಗ್ರಾ.ಪಂ ಸದ್ಯಸ್ಯೆ ಬಿಂಧು ಪಿ ಸೂಚಿಸಿದರು. ಜಯಂತ್ ಅವರನ್ನು ಗ್ರಾ.ಪಂ ಸದಸ್ಯೆ ಪದ್ಮಾವತಿ ಕಲ್ಲೇಮಠ ಸೂಚಿಸಿದರು.

ಇಲ್ಲಿ ಒಟ್ಟಾಗಿ ೫ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದು ಓರ್ವರು ಜೆಡಿಎಸ್ ಬೆಂಬಲಿತರಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್. ಹಾಗು ಸಹಾಯಕ ಚುನಾವಣಾ ಅಧಿಕಾರಿಯಾಗಿ ಪಿಡಿಒ ಮಣಿಯಾನ ಪುರುಷೋತ್ತಮ ಅವರಿದ್ದಾರೆ.