ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನಾ,ಮಾತೃವಂದನಾ, ಮಾತೃ ಧ್ಯಾನ,ಮಾತೃ ಭೋಜನಾ ಕಾರ್ಯಕ್ರಮ

0

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ.ಕರ್ನಾಟಕ ನೇತ್ರಾವತಿ ವಲಯ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಶಾಖೆ ವತಿಯಿಂದ ಆಗಸ್ಟ್ 13ರಂದು ಮಾತೃ ಪೂಜನಾ,ಮಾತೃವಂದನಾ,ಮಾತೃ ಧ್ಯಾನ ಮತ್ತು ಮಾತೃ ಭೋಜನಾ ಕಾರ್ಯಕ್ರಮ ಸುಳ್ಯ ಬಂಟರ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಖೆಯ ಎಲ್ಲಾ ಯೋಗ ಬಂಧುಗಳು ಜೊತೆಯಾಗಿ ಭಜನೆಯನ್ನು ಹಾಡುವುದು, ನಗುವೆ ಯೋಗ, ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.


ಪ್ರಾಂತ ಸೇವಾ ವಿಭಾಗದ ಸಂಚಾಲಕರಾದ ರವೀಶ್ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಪ್ರಸ್ತಾವಿಕ ನುಡಿ ನಮನಗಳ ಜೊತೆ ಮಾತೃ ಹೃದಯದ ವೈಶಾಲತೆಯನ್ನು ಮನ ತಟ್ಟುವ ರೀತಿಯಲ್ಲಿ ಸವಿಸ್ತಾರವಾಗಿ ವಿವರಿಸಿದರು. ಅಧ್ಯಕ್ಷತೆಯನ್ನು ಆನ್ಲೈನ್ ಶಿಕ್ಷಕರಾದ ಶ್ರೀಮತಿ ಸುಮಲತಾ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸರಕಾರಿ ಜೂನಿಯರ್ ಕಾಲೇಜ್ ಉಪನ್ಯಾಸಕಿ ಶ್ರಿಮತಿ ಮಮತಾ ವಹಿಸಿ ಮಾತನಾಡಿ ಯೋಗ ದಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ ಯೋಗದಿಂದ ಉತ್ತಮ ಆರೋಗ್ಯದೊಂದಿಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂಬುದಾಗಿ ಮಾಹಿತಿಯನ್ನು ನೀಡಿದರು.

ರವೀಶ್ ರವರು ಮಾತೃ ಪೂಜನಾ ಹಾಗೂ ಮಾತೃ ವಂದನವನ್ನು ನಡೆಸಿಕೊಟ್ಟರು.ಹಾಗೂ ಹಣತೆಯ ದಿವ್ಯ ಬೆಳಕಿನಲ್ಲಿ ಮಾತೃ ಧ್ಯಾನವನ್ನು ಮಾಡಿಸಿ ಎಲ್ಲರೂ ಭಾವುಕರಾಗುವಂತೆ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಬಿರದ 48 ದಿನಗಳ ತರಗತಿಯ ವರದಿಯನ್ನು ಶ್ರೀಮತಿ ಜ್ಯೋತಿ ವಾಚಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾರ್ಥಿಗಳು 48 ದಿನಗಳ ಯೋಗಾಭ್ಯಾಸದಿಂದ ತಮಗಾದ ಅನುಭವಗಳನ್ನು ವ್ಯಕ್ತಪಡಿಸಿದರು.

ಶ್ರೀಮತಿ ಸತ್ಯವತಿ ಪ್ರಾರ್ಥನೆ ನಡೆಸಿ ಶ್ರೀಮತಿ ರೀಟಾ ಸ್ವಾಗತಿಸಿ ಶ್ರೀಮತಿ ಮಂಜುಶ್ರೀ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ನಿಶಿತಾ ವಂದಿಸಿದರು.

ಜಿಲ್ಲಾ ಸಂಚಾಲಕರಾದ ಜಯರಾಮ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ತಾಲೂಕು ಸಂಚಾಲಕರಾದ ಯೋಗೀಶ್, ಮುಖ್ಯ ಶಿಕ್ಷಕರಾದ ಕೃಷ್ಣಾನಂದ ಹಾಗೂ ಪುತ್ತೂರಿನ ಶಿಕ್ಷಕರು,ಯೋಗಾ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನೆಯಲ್ಲೇ ತಯಾರಿಸಿದ ವೈಶಿಷ್ಟ್ಯ ಪೂರ್ಣವಾದ ಪ್ರಸಾದ ಹಾಗೂ ಪಾನಿಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ಬಾಂಧವರು ಭಾಗವಹಿಸಿದ್ದರು.