ದೊಡ್ಡೇರಿ ಶಾಲೆಗೆ ಶಾಸಕರ ಭೇಟಿ : ಪರಿಶೀಲನೆ – ಅಧಿಕಾರಿಗಳೊಂದಿಗೆ‌ ಸಮಾಲೋಚನೆ

0

ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿದ್ದ ಶಾಸಕಿ‌ ಭಾಗೀರಥಿ ಮುರುಳ್ಯ ಭೇಟಿ‌ ನೀಡಿ ಪರಿಶೀಲನೆ ನಡೆಸಿ, ಜಿ.ಪಂ. ಇಂಜಿನಿಯರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆ‌ ಸಮಾಲೋಚನೆ ನಡೆಸಿದರು.

ಇಂಜಿನಿಯರ್ ‌ಮಣಿಕಂಠರು ಮಾರ್ಚ್ ಕೊನೆಯಲ್ಲಿ ರೂ.7 ಲಕ್ಷ‌ ಅನುದಾನ ಬಂದಿರುವ‌ ಮತ್ತು ಅದು ಸರಕಾರಕ್ಕೆ ವಾಪಸ್ ‌ಹೋಗದೇ ಉಳಿಸಿಕೊಂಡಿರುವ ಪ್ರಕ್ರಿಯೆ‌ ಕುರಿತು‌ ವಿವರಿಸಿ, ಇದೀಗ ಸರಕಾರದ ಅಪ್ರೋವಲ್ ಸಿಗಬೇಕು ಎಂದು ಹೇಳಿದರು.

ಈ ಕುರಿತು‌ ಸರಕಾರದ ಪ್ರಧಾನ‌ ಕಾರ್ಯದರ್ಶಿಯವರಲ್ಲಿ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರಲ್ಲಿ‌ ಮಾತನಾಡಿ ಅಪ್ರೋವಲ್ ಮಾಡಿಸುತ್ತೇನೆ. ಶಾಲೆಯ‌ ಕೆಲಸ ಉತ್ತಮ ರೀತಿಯಲ್ಲಿ‌ ಮಾಡಿ. ಹೆಚ್ಚು ಅನುದಾನ ಬೇಕಾದಲ್ಲಿ ಒದಗಿಸುತ್ತೇನೆ.‌ ಅನುದಾನ ಬಂದ ಮೂರು ತಿಂಗಳೊಳಗೆ ಕೆಲಸ ಮಾಡಿ ಮುಗಿಸಬೇಕು ಎಂದು ಸೂಚನೆ ನೀಡಿದರೆನ್ನಲಾಗಿದೆ.

ಶಾಲಾ ಮಕ್ಕಳು ಸಣ್ಣ ಕೊಠಡಿಯಲ್ಲಿ ನೆಲದಲ್ಲಿ ಕುಳಿತಿರುವುದನ್ನು ಗಮನಿಸಿದ ಶಾಸಕರು ಮಕ್ಕಳಿಗೆ ಮ್ಯಾಟ್‌ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.

ಮಕ್ಕಳು‌ ಸಣ್ಣ ಕೊಠಡಿಯಲ್ಲಿ ಪಾಠ ಕೇಳಲು‌ ಕಷ್ಟವಾಗುತ್ತದೆ.‌ ಪಕ್ಕದಲ್ಲೆ ಇರುವ ಸ್ತ್ರೀ ಶಕ್ತಿ‌ ಭವನದಲ್ಲಿ ತರಗತಿ ನಡೆಸುವ‌ ಪ್ರಸ್ತಾಪ‌ ಬಂತೆಂದೂ, ಈ ವೇಳೆ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದರು ಮಕ್ಕಳಿಗೆ ಇಲ್ಲೇ‌ ಪಾಠ ಮಾಡಬಹುದು. ಶಾಲೆಯ‌ ಕೆಲಸ ಬೇಗ ಆಗಬೇಕು ‌ಎಂದು ಕೇಳಿಕೊಂಡರೆನ್ನಲಾಗಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಮಾಜಿ ಸದಸ್ಯೆ ರೇವತಿ ದೊಡ್ಡೇರಿ, ಜಗದೀಶ್ ದೊಡ್ಡೇರಿ, ಮಹೇಶ್ ರೈ ಮೇನಾಲ, ಪ್ರಬೋದ್ ಶೆಟ್ಟಿ‌ ಮೇನಾಲ, ಮುಳ್ಯ‌ಅಟ್ಲೂರು ಶಾಲಾ‌ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ವಾಸುದೇವ ನಾಯ್ಕ್ ಮೊದಲಾದವರು ಇದ್ದರು.