ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

0

ಗುತ್ತಿಗಾರು ಗ್ರಾ.ಪಂ ಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಆ. 25 ರಂದು ನಡೆದಿದ್ದು,

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಭಾರತಿ ಸಾಲ್ತಾಡಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಮಾಜಿ ಉಪಾಧ್ಯಕ್ಷೆ ಪ್ರಮೀಳಾ ಹಾಗೂ ಮೂವರು ಬಿಜೆಪಿ ಬೆಂಬಲಿತರ ಸದಸ್ಯರು ಗೈರು ಹಾಜರಾಗಿರುವುದಾಗಿ ವರದಿಯಾಗಿದೆ. ಅಧಿಕಾರ ಸ್ವೀಕಾರ ಸಂದರ್ಭ ಗ್ರಾ.ಪಂ ಸದಸ್ಯರುಗಳಾದ ವೆಂಕಟ್ ವಳಲಂಬೆ, ಮಂಜುಳಾ ಮುತ್ಲಾಜೆ, ವಿನಯ್ ಸಾಲ್ತಾಡಿ, ಮಾಯಿಲಪ್ಪ ಕೊಂಬೆಟ್ಟು, ಜಗದೀಶ ಬಾಕಿಲ, ಪಿಡಿಒ ಧನಪತಿ, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.