ಮಗು ಸಹಿತ ಬೈಕ್‌ನಲ್ಲಿ ಲಡಾಖ್‌ಗೆ ಹೊರಟ ಸುಳ್ಯದ ದಂಪತಿಗಳು

0


ಜಗತ್ತಿನ ಸುಂದರ ಸ್ಥಳಗಳಲ್ಲೊಂದಾದ ಜಮ್ಮು ಕಾಶ್ಮೀರದ ಲಡಾಖ್ ಗೆ ಸುಳ್ಯದ ದಂಪತಿಗಳು ಮತ್ತು ಅವರ ಪುಟ್ಟ ಮಗು ತೆರಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲಡಾಖ್ ಗೆ ಬೈಕ್ ಗಳಲ್ಲಿ,ಸೈಕಲ್ ಗಳಲ್ಲಿ, ಹಲವಾರು ಯುವಕರು ಯುವತಿಯರು ತೆರಳುತ್ತಾರೆ ಅದರೆಡೆಯಲ್ಲಿ ಸುಳ್ಯದ ದಂಪತಿಗಳು ತನ್ನ ಮೂರು ವರ್ಷ ಪ್ರಾಯದ ಪುಟ್ಟ ಮಗುವಿನೊಂದಿಗೆ ಲಡಾಖ್ ಯಾತ್ರೆ ಕೈಗೊಂಡಿದ್ದಾರೆ.
ಸುಳ್ಯದ ಯುವ ಉದ್ಯಮಿ ಹಳೇಗೆಟಿನಲ್ಲಿರುವ ಹೋಮ್ ಗ್ಯಾಲರಿ ಮಾಲಕ ತೌಹೀದ್ ರೆಹ್ಮಾನ್ ಮತ್ತು ಅವರ ಪತ್ನಿ ಜಸ್ನೀಯಾ ಹಾಗೂ ಪುಟ್ಟ ಮಗ ಜಸೀಲ್ ರಹ್ಮಾನ್ ಆಗಸ್ಟ್ ೧೫ ರಂದು ಸುಳ್ಯದಿಂದ ತೆರಳಿದ್ದಾರೆ.


ತೌವೀದ್ ರವರು ಅವರ ರೊಯಲ್ ಎನ್ಪಿಲ್ಡ್ ಬುಲೆಟ್ ನಲ್ಲಿ ಲಡಾಖ್ ಪರ್ವತಕ್ಕೆ ಸವಾರಿ ಮಾಡುತ್ತಿದ್ದಾರೆ.
ಹೆಲ್ಮೆಟ್, ಕೈ ಕವಚ,ಸವಾರಿ ಬೂಟುಗಳು, ಮತ್ತು ಪುಲ್ ಜಾಕೆಟ್ ಹಾಕಿಕೊಂಡು ಲಡಾಖ್ ನ ಸುಂದರವಾದ ಪರ್ವತಕ್ಕೆ ತಲುಪಿದ್ದಾರೆ.
ಸುಳ್ಯದಿಂದ ಪ್ರಥಮ ಬಾರಿಗೆ ದಂಪತಿಗಳು ಮತ್ತು ಪುಟ್ಟ ಮಗು ತೆರಳಿದ್ದು ವಿಶೇಷವಾಗಿದೆ.