ಸುಳ್ಯ ಝೋನ್ ಜಂಇಯ್ಯತುಲ್ ಉಲಮಾ ಇದರ ಮಹಾಸಭೆ ಆ.29 ರಂದು ಮನ್ಹಜುದ್ದಅ್ವತುಲ್ ಇಸ್ಲಾಮಿಯಾ ಬಿಳಿಯಾರಿನಲ್ಲಿ ನಡೆಯಿತು.
ಜಂಇಯ್ಯತುಲ್ ಉಲಮಾ ಝೋನ್ ಅಧ್ಯಕ್ಷರಾದ ಸೈಯದ್ ಕುಂಞಿಕೋಯ ಸಅದಿ ತಂಙಳ್ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದ ಉಧ್ಘಾಟನೆ ಹಾಗೂ ಫತ್ಹುಲ್ ಮುಈನ್ ದರ್ಸ್ ಉಧ್ಘಾಟನೆಯನ್ನು ಕರ್ನಾಟಕ ಜಂಇಯತುಲ್ ಉಲಮಾ ಮುಶಾವರ ಸದಸ್ಯರಾದ ಅಲೀ ಫೈಝಿ ಬಾಳೆಪುಣಿ ಉಸ್ತಾದರು ನೆರವೇರಿಸಿದರು. ಸಂಸ್ಥೆಯ ಮುಖಂಡರಾದ ಉಮರ್ ಸಖಾಫಿ ಕಾಜೂರು ಶುಭ ನುಡಿಯನ್ನಾಡಿದರು.
ಕರ್ನಾಟಕ ಮುಶಾವರ ಸದಸ್ಯ ಡಿ.ಕೆ ಉಮರ್ ಸಖಾಫಿ ತರಬೇತಿ ನಡೆಸಿ ಮಹಾಸಭೆಯ ನೇತೃತ್ವ ವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಂತರ ಸಮಿತಿಯಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನೂತನ ಸದಸ್ಯರುಗಳನ್ನು ಸೇರಿಸಲಾಯಿತು.
ಉಲಮಾ ನಾಯಕರ ಸಾಂಧರ್ಭಿಕ ಚರ್ಚೆಗಳ ಬಳಿಕ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾಹಿ ಸಅದಿ ವಂದಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.