ನ.25 ರಂದು ದಶ ಸಂಭ್ರಮದ ಪ್ರಯುಕ್ತ ಸತ್ಯನಾರಾಯಣ ಪೂಜೆ
ಸುಳ್ಯ: ಮದುವೆಯ ಕನಸನ್ನು ನನಸಾಗಿಸುವ ಸಂಭ್ರಮಕ್ಕೆ ಮೂರ್ತರೂಪ ಕೊಟ್ಟ ಸುಂದರ ಸಭಾಭವನ ಸುಳ್ಯ ಓಡಬಾಯಿಯ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ. ಕಲಾಮಂದಿರಕ್ಕೆ ಈಗ ದಶ ವರುಷದ ಸಂಭ್ರಮ. ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸುಳ್ಯಕ್ಕೆ ಮುಕುಟಮಣಿಯಾಗಿ ತೆರೆದುಕೊಂಡ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ ನೂರಾರು ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿತು. ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಇದ್ದಂತಹಾ ವಿಶಾಲವಾದ ಮತ್ತು ಅತ್ಯಾಧುನಿಕ ಮಂದಿರವನ್ನು ಸುಳ್ಯದಲ್ಲಿಯೂ ಆರಂಭಿಸುವ ಮೂಲಕ ದಶಕದ ಹಿಂದೆ ದೊಡ್ಡ ಕ್ರಾಂತಿಯೇ ಉಂಟಾಯಿತು. ಸಾವಿರಾರು ಮಂದಿ ಭಾಗವಹಿಸುವ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಬೇರೆ ಕಡೆ ಹಾಲ್ ಹುಡುಕಬೇಕಾಗಿತ್ತು. ಆದರೆ ಕುಂಭಕೋಡು ಹಾಲ್ ಆದ ಬಳಿಕ ಸುಳ್ಯ ಹಾಗೂ ಪರಿಸರದ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಇಲ್ಲಿಯೇ ನಡೆಸಲು ಅವಕಾಶ ನೀಡಿದೆ.
ಇದೀಗ ದಶ ವರುಷಗಳು ಪೂರೈಸುತ್ತಿರುವ ಹಿನ್ನಲೆಯಲ್ಲಿ ನ.25 ರಂದು ದಶ ಸಂಭ್ರಮದ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ.
ವಿಶೇಷತೆಗಳು:
ಸುಳ್ಯದ ಅತ್ಯಂತ ದೊಡ್ಡದಾದ ಮತ್ತು ವ್ಯವಸ್ಥಿತ ಸಭಾಂಗಣವಾದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರ ಹಲವು ವಿಶೇಷತೆಗಳನ್ನು ಹೊಂದಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಮೀಪ ವಿಶಾಲವಾದ ಸುಸಜ್ಜಿತ ಹಾಲ್ ತಲೆ ಎತ್ತಿ ನಿಂತಿದೆ. ಶುದ್ಧ ಸಸ್ಯಾಹಾರಿ ಮಂದಿರದಲ್ಲಿ ಮದುವೆ ಮತ್ತಿತರ ಎಲ್ಲಾ ಕಾರ್ಯಕ್ರಮ ನಡೆಸುವ ವ್ಯವಸ್ಥೆ ಇದೆ.
ವಿಶಾಲವಾದ ಹಾಲ್, ವೇದಿಕೆ, ಕಣ್ಮನ ಸೆಳೆಯುವ, ಜಗಮಗಿಸುವ ಲೈಟಿಂಗ್ಸ್ ಹಾಗೂ ವಿನ್ಯಾಸ. ವಿಶಾಲವಾದ ಭೋಜನಾಲಯ ವ್ಯವಸ್ಥೆ, ಒಂದು ಸಾವಿರ ಆಸನದ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, 150ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಸ್ಥಳಾವಕಾಶ, ವಸತಿ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ, ಯಥೇಚ್ಛ ನೀರಿನ ವ್ಯವಸ್ಥೆ. ಎಸಿ ಹಾಗೂ ನಾನ್ ಎಸಿ ವ್ಯವಸ್ಥೆ ಇಲ್ಲಿದೆ. ಬೇಕಾದವರಿಗೆ ಹವಾನಿಯಂತ್ರಿತ ವ್ಯವಸ್ಥೆ ಒದಗಿಸಲಾಗುತ್ತದೆ.
ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಹಾಲ್ನ ಒಂದು ಭಾಗವನ್ನು ಅತೀ ಕಡಿಮೆ ದರದಲ್ಲಿ ನೀಡಲಾಗುತ್ತದೆ.
ಕಳೆದ ಹತ್ತು ವರ್ಷಗಳಿಂದ ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ನಡಸಿ ಕೈ ಜೋಡಿಸಿದ ಎಲ್ಲಾ ಹಿತೈಷಿಗಳಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮುಂದೆಯೂ ಎಲ್ಲರ ಸಹಕಾರವನ್ನು ಬಯಸುತ್ತೇವೆ ಎಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದ ಮಾಲಕರಾದ ಶ್ರೀಮತಿ ಶಶಿಕಲಾ ಶುಭಕರ ರಾವ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8618165397, 7760829870