ಸುಳ್ಯದ ಕುಂ..ಕುಂ.. ಫ್ಯಾಶನ್ ವಸ್ತ್ರ ಮಳಿಗೆಯಲ್ಲಿ ಅದ್ದೂರಿ ಸೇಲ್‌ಗೆ ಚಾಲನೆ

0

ಅತೀ ದೊಡ್ಡ ಸಂಗ್ರಹ – ಅತೀ ಕಡಿಮೆ ಬೆಲೆ – ಪ್ರತೀ ದಿನ ಹೊಸ ಸಂಗ್ರಹ

ಜವುಳಿ ಉದ್ಯಮದಲ್ಲಿ ಸದಾ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಸುಳ್ಯದ ಪ್ರತಿಷ್ಠಿತ ಜವುಳಿ ಮಳಿಗೆ, ಮುಳ್ಯರಸ್ತೆಯ ದ್ವಾರಕಾ ಹೋಟೆಲ್‌ನ ಎದುರಿನ ಕಾಂಪ್ಲೆಕ್ಸ್‌ನಲ್ಲಿರುವ ಕುಂ..ಕುಂ.. ಫ್ಯಾಶನ್ ಲೋಕದ ಮಹಾ ಉತ್ಸವ ಸೆ.೧ರಂದು ಪ್ರಾರಂಭಗೊಂಡಿದೆ.


ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನು ಸಮರ್ಪಿಸುತ್ತಿದೆ.
ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ಕುಂ..ಕುಂ.. ಮಳಿಗೆಯು ಕಲ್ಪಿಸಿದೆ.

ಪ್ರತಿ ವರ್ಷಹಬ್ಬದ ಸಂಭ್ರಮಕ್ಕೆ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ತಮ್ಮ ಮನದಿಚ್ಚೆಯ ಉಡುಪುಗಳನ್ನು ಕೊಂಡುಕೊಳ್ಳುವ ವಿಪುಲ ಅವಕಾಶಗಳನ್ನು ನೀಡುತ್ತಿದೆ. ಈ ವರ್ಷವೂ ಮಹಾ ಉತ್ಸವ ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಅತೀ ಕಡಿಮೆ ದರ, ಹೊಸ ಹೊಸ ಸಂಗ್ರಹ: ಕುಂ..ಕುಂ..ಮಹಾ ಉತ್ಸವದಲ್ಲಿ ವಿವಿಧ, ವೆರಾಟಿ, ವಿನ್ಯಾಸಗಳ ಚೂಡಿದಾರ್ ಟಾಪ್‌ಗಳು,ಅತೀ ಕಡಿಮೆ ಬೆಲೆಯ ನೈಟಿಗಳು, ಗವನ್, ನೈಟ್ ಪ್ಯಾಂಟ್‌ಗಳು, ಟಿ-ಶರ್ಟ್‌ಗಳು, ಮಕ್ಕಳ ಉಡುಪುಗಳು ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಕಣ್ಮನ ಸೆಳೆಯುವ ಸೀರೆಗಳು, ಪುರುಷರ ಉಡುಪುಗಳು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ನವ ನವೀನ ಮಾದರಿಯ ಉಡುಪುಗಳ ಬೃಹತ್ ಸಂಗ್ರಹವಿದೆ. ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉತ್ತಮ ಗುಣ ಮಟ್ಟದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿರಿಯ ಅನುಭವೀ ಸಿಬ್ಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಪೂರಕವಾಗಿ ಮಳಿಗೆಯಲ್ಲಿ ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಸೆ.೧ರಂದು ಪ್ರಾರಂಭಗೊಂಡಿದ್ದು ಮುಂದಿನ ೧೫೦ ದಿನಗಳ ಕಾಲ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.
ಮದುವೆಯ ಎಕ್ಸ್‌ಕ್ಲೂಸಿವ್ ಕಲೆಕ್ಷನ್: ಮದುವೆ ಸೀರೆಗಳ ಉತ್ತಮ ಆಯ್ಕೆಗೆ ಕುಂ..ಕುಂ.. ಸುಳ್ಯದ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹ ಮಳಿಗೆಯಲ್ಲಿದೆ.ಪ್ರತಿ ದಿನ ಮದುವೆ ಜವುಳಿಯ ಹೊಸ ಸಂಗ್ರಹವಿರುವ ಸುಳ್ಯದ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
೧೦ ವರ್ಷಗಳ ಹಿಂದೆ ಸುಳ್ಯದಲ್ಲಿ ಪ್ರಾರಂಭವಾದ ಜವುಳಿ ಉದ್ಯಮವು ಸುಳ್ಯದ ಜನತೆಯ ಅಗತ್ಯತೆಗಳಿಗೆ ತಕ್ಕಂತೆ ಉತ್ತಮ ಸೇವೆ ನೀಡುತ್ತಾ ಯಶಸ್ವಿಯಾಗುತ್ತಾ ಸಾಗಿದೆ.ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕಳೆದ ವರ್ಷ ರಲ್ಲಿ ಮಳಿಗೆಯನ್ನು ವಿಸ್ತರಿಸಿದೆ. ತನ್ನ ವಿಶೇಷ ಸೇವೆಯ ಮೂಲಕ ಸುಳ್ಯದ ಮಾತ್ರವಲ್ಲದೇ ನೆರೆಹೊರೆಯ ತಾಲೂಕುಗಳಲ್ಲಿಯೂ ಮನೆ ಮಾತಾಗಿರುವ ಕುಂ..ಕುಂ.. ತನ್ನ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ ಈ ಮಹೋತ್ಸವವನ್ನು ಆರಂಭಿಸಿದೆ. ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ.
ಅದ್ದೂರಿ ಚಾಲನೆ – ಗೌರವ : ಈ ವರ್ಷ ಸೆ.೧ರಂದು ೧೫೦ ದಿನಗಳ ಬಿಗ್ ಸೇಲ್‌ಗೆ ಚಾಲನೆ ದೊರೆತಿದೆ. ಸಂಸ್ಥೆಯ ಮಾಲಕ ಧನ್‌ರಾಮ್ ಪಟೇಲ್ ದೀಪ ಬೆಳಗಿ ಚಾಲನೆ ನೀಡಿದರು. ಸುಳ್ಯದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸುಳ್ಯದ ನಗರ ಪಂಚಾಯತ್‌ನ ೧೯ ಮಂದಿ ಪೌರ ಕಾರ್ಮಿಕರನ್ನು ಸಂಸ್ಥೆಗೆ ಬರ ಮಾಡಿಕೊಂಡು ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಬಂಪರ್ ಬಹುಮಾನ ಲಾಂಚಿಂಗ್ : ೧೫೦ ದಿನಗಳ ಕಾಲ ಗ್ರಾಹಕರು ಖರೀದಿಸುವ ವಸ್ತ್ರಗಳಿಗೆ ಗಿಫ್ಟ್ ನೀಡುವ ಜತೆಗೆ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. ೯೯೯ ರ ಖರೀದಿಗೆ ಸಿಲ್ವರ್ ಕಾರ್ಡ್, ೨೪೯೯ರ ಖರೀದಿಗೆ ಗೋಲ್ಡ್ ಕಾರ್ಡ್, ೪೯೯೯ ರೂ ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತಿದೆ. ಬಂಪರ್ ಬಹುಮಾನವಾದ ಬೈಕ್ ಹಾಗೂ ಸ್ಕೂಟಿಯನ್ನು ಇಂದು ಲಾಂಚಿಂಗ್ ಮಾಡಲಾಯಿತು. ಅಲ್ಲದೆ ಫ್ರಿಟ್ಜ್, ಟಿ.ವಿ., ವಾಷಿಂಗ್ ಮೆಷಿನ್ ಇತ್ಯಾದಿ‌ಬಹುಮಾನಗಳು ಇದೆ. ಮತ್ತು ಖರೀದಿಯ ಮೇಲೆ ಬಹುಮಾನ ಖಚಿತವಾಗಿ ನೀಡಲಾಗುತ್ತದೆ.