ಸೆ. 10: ಶೇಣಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀ ಸತ್ಯನಾರಾಯಣ ಪೂಜೆ

0

ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ ಶೇಣಿ ಇದರ ಆಶ್ರಯದಲ್ಲಿ 20ನೇ‌ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಸತ್ಯನಾರಾಯಣ ಪೂಜೆ
ಸೆ. 10ರಂದು ಶೇಣಿ ಶಾಲಾ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನೆ ನಡೆಯಲಿದೆ. ಬಳಿಕ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಸಮಾರೋಪ‌ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ ಎಂದು ಶೇಣಿ
ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ ಅಧ್ಯಕ್ಷ ದೀಕ್ಷಿತ್ ಪೋನಡ್ಕ ತಿಳಿಸಿದ್ದಾರೆ. ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಧರ್ಮಪಾಲ ಪೂಜಾರಿ ಶೆಣಿ, ಕಾರ್ಯದರ್ಶಿಯಾಗಿ ಅಶೋಕ ಪೂಜಾರಿ ಶೇಣಿ, ಅಶ್ವಿನ್ ರೈ ಶೇಣಿ ಸೇವೆ ಸಲ್ಲಿಸುತ್ತಿದ್ದಾರೆ.