ಗಣಪತಿ‌ ಮೂರ್ತಿ ಇಟ್ಟು ಗಣೇಶೋತ್ಸವ ಆಚರಣೆ : ಸುಳ್ಯ‌ ನಗರ ಪಂಚಾಯತ್ ಸೂಚನೆ

0

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ ( ನಿವಾರಣೆ ಮತ್ತು ನಿಯಂತ್ರಣ ) ಕಾಯಿದೆ 1974ರ ಕಲಂ 33 ಅ ರಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ಪ್ಲಾಸ್ಟರ್ ಓಫ್ ಪ್ಯಾರಿಸ್ ನಿಂದ ತಯಾರಿಸಿರುವ ಹಾಗೂ ಬಣ್ಣ ಲೇಪಿತವಾದಂತಹ ಗೌರಿ – ಗಣೇಶ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿ ಅಧಿಸೂಚನೆಯನ್ನು ಹೋರಾಡಿಸಿರುತ್ತದೆ.

ಅದರಂತೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಲ್ಲಿ, ಸಂಘ – ಸಂಸ್ಥೆಗಳ ವತಿಯಿಂದ ಗೌರಿಗಣೇಶ ಮೂರ್ತಿ ಇಟ್ಟು ಗಣೇಶೋತ್ಸವ ಆಚರಣೆ ಮಾಡುವ ಸಾರ್ವಜನಿಕರು ಮೂರ್ತಿಯನ್ನು ವಿಸರ್ಜನೆ ಮಾಡುವ ಸಂದರ್ಭ ಪಂಚಾಯತ್ ನಿಗದಿಪಡಿಸಿದ ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದು.

  • ಬಣ್ಣ ರಹಿತ ಮಣ್ಣಿನ / ನೈಸರ್ಗಿಕ ಮೂರ್ತಿಗಳನ್ನು ಬಳಸುವುದು.
  • ವಿಸರ್ಜನೆ ಪೂರ್ವದಲ್ಲಿ ಹೂ, ಹಣ್ಣು, ಬಾಳೆ ಗಿಡ, ಇತ್ಯಾದಿ ಸಾಮಗ್ರಿಗಳನ್ನು ಪ್ರತ್ಯೇಕಿಸಿ ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ನೀಡುವುದು.
  • ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದಿಸುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಗರ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಸುಳ್ಯ ನಗರ ಪಂಚಾಯತ್ ಇವರು ವಿನಂತಿಸಿರುತ್ತಾರೆ.