ಸುಳ್ಯ ತಾಲೂಕು ಭಜನಾ ಪರಿಷತ್ ನ ವತಿಯಿಂದ ನಡೆಸಲ್ಪಡುವ ತಾಲೂಕು ಮಟ್ಟದ ಭಜನೋತ್ಸವ ಹಾಗೂ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟದಲ್ಲಿ ಭಾಗವಹಿಸುವ ಕುರಿತು ದೊಡ್ಡತೋಟ ವಲಯ ಮಟ್ಟದ ಪೂರ್ವ ಭಾವಿ ಸಭೆಯು ಚೊಕ್ಕಾಡಿ ರಾಮ ದೇವಾಲಯದ ದೇಸಿ ಭವನದಲ್ಲಿ ಸೆ.8 ರಂದು ನಡೆಯಿತು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರು ಗೌರವ ಸಲಹೆಗಾರರಾದ ಆನೆಕಾರ ಗಣಪಯ್ಯ ರವರು ದೀಪ ಪ್ರಜ್ವಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾಧಿಕಾರಿ ನಾಗೇಶ್ ರವರು “ಧರ್ಮಸ್ಥಳದಲ್ಲಿ ಸೆ. 27 ರಿಂದ ಅ.4 ರ ತನಕ ನಡೆಯಲಿರುವ 25 ನೇ ವರ್ಷದ ಭಜನಾ ಕಮ್ಮಟದಲ್ಲಿ ಭಾಗವಹಿಸುವ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು.
ಭಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ
ಸದುದ್ದೇಶದ ಕುರಿತು ಸಂಕ್ಷಿಪ್ತ ವಿವರವನ್ನು ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ
ದೊಡ್ಡತೋಟ ವಲಯದ ಭಜನಾ ಮಂಡಳಿಯ ಸದಸ್ಯರನ್ನು ಒಳಗೊಂಡ
ಭಜನೋತ್ಸವ 2023 ರ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಬಾಲಕೃಷ್ಣ ಬೊಳ್ಳೂರು, ಜಗನ್ಮೋಹನ ರೈ ಮರ್ಕಂಜ, ರಾಜಾರಾಮ ಭಟ್ ಬೆಟ್ಟ, ಪಂ.ಉಪಾಧ್ಯಕ್ಷೆ ಭುವನೇಶ್ವರಿ ಪದವು, ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗುಳಿ, ವಲಯ ಸಂಚಾಲಕ ದಯಾನಂದ ಕೊರತ್ತೋಡಿ,
ಜತೆ ಕಾರ್ಯದರ್ಶಿ ನಾರಾಯಣ ಕಳಂಜ, ಒಕ್ಕೂಟದ ಅಧ್ಯಕ್ಷೆ ವೀಣಾ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಸವಿತಾ ಪ್ರಾರ್ಥಿಸಿದರು. ಮೇಲ್ವಿಚಾರಕ ಕೃಷ್ಣಪ್ಪ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು.