ಸಂಪಾಜೆ ಗ್ರಾ.ಪಂ.ನಲ್ಲಿ ಸಾಮಾನ್ಯ ಸಭೆ

0


ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ 2 ನೇ ಹಂತದ ಗ್ರಾಮ ಪಂಚಾಯತ್ ಆಡಳಿತ ಅವಧಿಯ ಪ್ರಥಮ ಸಾಮಾನ್ಯ ಸಭೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ವಿಚಾರ ಚರ್ಚೆ ನಡೆಯಿತು.

ಮೀನು ಮಾರುಕಟ್ಟೆ ವಿಚಾರ, ವಾರ್ಡ್ ಸಭೆ, ಗ್ರಾಮ ಸಭೆ ದಿನಾಂಕ ನಿಗದಿ, ಪಾರ್ಕಿಂಗ್, ಕೂಲಿಶೆಡ್ ಬಸ್ ತಂಗುದಾನ ರಚನೆ, ಸಾರ್ವಜನಿಕ ರಸ್ತೆಯಲ್ಲಿ ದನಗಳ ಹಾವಳಿ, ಕುಡಿಯುವ ನೀರಿನ ಬಗ್ಗೆ ಮುಂಜಾಗ್ರತೆ ,ತೆರಿಗೆ ವಸೂಲಿ ಹಲವು ವಿಚಾರಗಳ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಸದಸ್ಯರುಗಳಾದ ಸೋಮಶೇಖರ್ ಕೊಇಂಗಾಜೆ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬುಶಾಲಿ, ಸವಾದ್, ವಿಜಯ ಕುಮಾರ್, ವಿಮಲಾ ಪ್ರಸಾದ್, ಅನುಪಮಾ, ಲಿಸ್ಸಿ ಮೊನಾಲಿಸಾ, ಸುಶೀಲ, ರಜನಿ ಶರತ್ ಉಪಸ್ಥಿತರಿದ್ದರು.